
ಬೆಳಗಾವಿ: ಮಹದಾಯಿ ನದಿ ಯೋಜನೆ ವಿಚಾರವಾಗಿ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಕರ್ನಟಕ, ಗೋವಾ, ಮಹರಾಷ್ಟ್ರ ರಾಜ್ಯಗಳ ನಡುವಿನ ಜಲವಿವಾದ ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಕಿರಿಕ್ ಮಾಡಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದೆ.
ಗೋವಾ ಸರ್ಕಾರದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಮಹದಾಯಿ ಪ್ರವಾಹ ತಂಡ ರಚನೆ ಮಾಡಿದ್ದು, ಈ ತಂಡ ನಾಳೆ ಕಣಕಂಬಿಗೆ ಭೇಟಿ ನೀಡಲಿದೆ. ಈ ಬಗ್ಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕಂಬಿಯ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದು, ಸದ್ಯದ ವಸ್ತು ಸ್ಥಿತಿ, ನೀರಿನ ಹರಿವು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.