ತನ್ನ ರೂಮ್‌ಮೇಟ್‌ಗಳು ತನ್ನನ್ನು ಸುಲಿಗೆ ಮಾಡಿದ್ದಾರೆ, ವಿವಸ್ತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಹರಿಯಾಣದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪುಣೆಯ ಮಹಾರಾಷ್ಟ್ರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್ 17 ರಂದು ವಘೋಲಿಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಚಿನ್ನದ ಸರ ಮತ್ತು ಲ್ಯಾಪ್‌ಟಾಪ್ ಕಳ್ಳತನವಾಗಿದೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಆದರೆ ಆರೋಪವನ್ನ ಯುವತಿ ಸಾರಾಸಗಟಾಗಿ ನಿರಾಕರಿಸಿದ್ದಳು.
ನಂತರ ಇಬ್ಬರು ಹುಡುಗಿಯರು ಸಂತ್ರಸ್ತೆಯನ್ನು ಎದುರಿಸಲು ಮೂವರು ವಿದ್ಯಾರ್ಥಿಗಳನ್ನು ಕರೆದಿದ್ದಾರೆ. ಅವರು ಯುವತಿಯನ್ನು ಸಂಪೂರ್ಣವಾಗಿ ವಿವಸ್ತ್ರಗೊಳಿಸಿ ಒತ್ತಾಯಿಸಿ ಹಣ ದೋಚಿದ್ದಾರೆ. ವಾಘೋಲಿಯಲ್ಲಿರುವ ಅವರ ಬಾಡಿಗೆ ಫ್ಲಾಟ್ ನಲ್ಲಿ ಘಟನೆ ನಡೆದಿದೆ.
ಇತರ ಇಬ್ಬರು ಯುವತಿಯರು ಸೇರಿದಂತೆ ಐವರು ಸ್ನೇಹಿತರು ಬೇರೆ ಬೇರೆ ರಾಜ್ಯಗಳಿಂದ ಬಂದವರು. ಘಟನೆ ವೇಳೆ ಸಂತ್ರಸ್ತೆಯನ್ನು ವೈಯಕ್ತಿಕವಾಗಿ, ಆಕೆಯ ಲಗೇಜ್ ಮತ್ತು ಇತರ ವಸ್ತುಗಳನ್ನು ಪರಿಶೀಲಿಸಿದ್ದಾರೆ. ಆಕೆಯ ಆಕ್ಷೇಪಣೆಯ ಹೊರತಾಗಿಯೂ ಅವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ.
30,000 ನಗದು ಜೊತೆಗೆ ಆನ್‌ಲೈನ್ ವರ್ಗಾವಣೆಯಲ್ಲಿ 50,000 ರೂ.ಗಳನ್ನು ಪಾವತಿಸುವಂತೆ ಯುವಕರು ಒತ್ತಾಯಿಸಿದ್ದರು. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಂತಹ ಇತರ ವೈಯಕ್ತಿಕ ವಸ್ತುಗಳನ್ನು ದೋಚಿ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಸಿದ್ದರು.
ಸಂತ್ರಸ್ತೆ ಹಣ ಪಾವತಿಸಿ ನಂತರ ತನ್ನ ಊರಿಗೆ ಮರಳಿದ ನಂತರ ಅಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ವಿವರವಾದ ತನಿಖೆಗಾಗಿ ಪ್ರಕರಣದ ತನಿಖೆಯನ್ನು ಪುಣೆಯ ಲೋನಿಕಂಡ್ ಪೊಲೀಸ್ ಠಾಣೆಗೆ ರವಾನಿಸಲಾಗಿದೆ.