ಮಹಾರಾಷ್ಟ್ರದ ಪನ್ವೆಲ್ ಬಳಿಯ ಗ್ರಾಮವೊಂದರಲ್ಲಿ, ದೇವಸ್ಥಾನವೊಂದರ ಪ್ರಸಾದ ಸೇವಿಸಿದ 36 ಮಂದಿ ಅಸ್ವಸ್ಥರಾಗಿದ್ದ ಘಟನೆ ಜರುಗಿದೆ.
ಇಲ್ಲಿನ ರಿತ್‌ಘರ್ ದೇವಸ್ಥಾನದಲ್ಲಿ ’ದತ್ತ ಜಯಂತಿ’ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಗಿತ್ತು ಎಂದು ಪನ್ವೆಲ್ ತಹಶೀಲ್ದಾರ್ ವಿಜಯ್ ಟಾಲೇಕರ್ ತಿಳಿಸಿದ್ದಾರೆ.
ONGC ಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ಡಿಟೇಲ್ಸ್
“ಪ್ರಸಾದ ಸೇವನೆ ಮಾಡುತ್ತಲೇ ವಾಕರಿಕೆ, ವಾಂತಿ ಹಾಗೂ ಹೊಟ್ಟೆ ನೋವೆಂದು 36 ಮಂದಿ ದೂರಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಬಹುತೇಕರು ಅದಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯದ ಮಟ್ಟಿಗೆ ಎಲ್ಲರೂ ಸ್ಥಿರವಾಗಿದ್ದಾರೆ. ಪರಿಸ್ಥಿತಿಯ ಅಧ್ಯಯನ ಮಾಡಲು ವೈದ್ಯಕೀಯ ತಂಡವೊಂದು ಗ್ರಾಮದಲ್ಲಿದೆ,” ಎಂದು ತಹಶೀಲ್ದಾರ್ ತಿಳಿಸಿದ್ದಾರೆ.