ಭಾನುವಾರ ಬೆಳ್ಳಂ ಬೆಳಗ್ಗೆ ಚೀನಾದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪವಾಗಿದ್ದು, 21 ಮಂದಿಗೆ ಗಂಭೀರ ಗಾಯಗಳಾಗಿದೆ.
ಪೂರ್ವ ಚೀನಾದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 21 ಜನರು ಗಾಯಗೊಂಡಿದ್ದಾರೆ ಮತ್ತು ಹಲವಾರು ಕಟ್ಟಡಗಳು ಕುಸಿದಿವೆ.ಸೋಷಿಯಲ್ ಮೀಡಿಯಾ ವೀಡಿಯೊ ವೈರಲ್ ಆಗಿದ್ದು, ನಡುಗುವ ನೆಲ ಮತ್ತು ಕುಸಿಯುತ್ತಿರುವ ಮನೆಗಳಿಂದ ಜನರುಪಲಾಯನ ಮಾಡುತ್ತಿದ್ದಾರೆ. ಸಿ ಪ್ರಾಂತ್ಯದ ಡೆಝೌನಿಂದ ದಕ್ಷಿಣಕ್ಕೆ 26 ಕಿಲೋಮೀಟರ್ (16 ಮೈಲಿ) ದೂರದಲ್ಲಿ ಮುಂಜಾನೆ 2:33 ಕ್ಕೆ (1833 ಜಿಎಂಟಿ ಶನಿವಾರ) ಭೂಕಂಪ ಸಂಭವಿಸಿದ್ದು, ಸುಮಾರು 10 ಕಿಲೋಮೀಟರ್ ಆಳವನ್ನು ತಲುಪಿದೆ ಎಂದು ವರದಿಯಾಗಿದೆ.
ಹಿಂದಿನ ಭೂಕಂಪದ ದತ್ತಾಂಶದ ಆಧಾರದ ಮೇಲೆ, ಭೂಕಂಪಗಳ ಪರಿಣಾಮದ ಬಗ್ಗೆ ಪ್ರಾಥಮಿಕ ಅಂದಾಜುಗಳನ್ನು ನೀಡುವ USGS’s PAGER ವ್ಯವಸ್ಥೆಯು ರೆಡ್ ಅಲರ್ಟ್ ನೀಡಿದ್ದು, ಗಣನೀಯ ಹಾನಿ ಮತ್ತು ಹಲವಾರು ಸಾವುನೋವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ಶಾಂಡೊಂಗ್ ಅಧಿಕಾರಿಗಳ ಪ್ರಕಾರ, ಭೂಕಂಪದ ಪರಿಣಾಮವಾಗಿ ಕನಿಷ್ಠ 21 ಜನರು ಗಾಯಗೊಂಡಿದ್ದಾರೆ ಮತ್ತು 126 ಮನೆಗಳು ಅಥವಾ ಕಟ್ಟಡಗಳು ಕುಸಿದಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಶಾಂಡೊಂಗ್ ಪ್ರಾಂತ್ಯಕ್ಕೆ ತಂಡವನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.