ಮೈಗೆಲ್ಲಾ ಗರಿಷ್ಠ ಸೂಜಿ ಚುಚ್ಚುವಿಕೆಯಿಂದ ಹಿಡಿದು ಉದ್ದನೆಯ ರೆಪ್ಪೆಗೂದಲು ಬೆಳೆಯುವವರೆಗೆ, ನೀವು ವಿಚಿತ್ರವಾದ ಗಿನ್ನಿಸ್ ವಿಶ್ವ ದಾಖಲೆಗಳ ಬಗ್ಗೆ ಬಹುಶಃ ಕೇಳಿರುತ್ತೀರಾ. ಇದೀಗ ವ್ಯಕ್ತಿಯೊಬ್ಬರು ತನ್ನ 2016ರ ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದ್ದಾರೆ.
ತಲೆಯ ಮೇಲೆ ಹೆಚ್ಚು ಪಾನೀಯ ಕ್ಯಾನ್ಗಳನ್ನು ಇರಿಸಿದ ಜೇಮೀ ಕೀಟನ್, ಕನಿಷ್ಠ ಐದು ಸೆಕೆಂಡುಗಳ ಕಾಲ ತನ್ನ ತಲೆಯ ಮೇಲೆ 10 ಕ್ಯಾನ್‌ಗಳನ್ನು ಬ್ಯಾಲೆನ್ಸ್ ಮಾಡುವ ಮೂಲಕ ಈ ಸಾಧನೆ ಮಾಡಿದ್ರು. ಎಂಟು ಕ್ಯಾನ್‌ಗಳನ್ನು ಬ್ಯಾಲೆನ್ಸ್ ಮಾಡಿದ ಅವರ ಹಿಂದಿನ ದಾಖಲೆಯನ್ನು ಜಪಾನ್‌ನ ಶುನಿಚಿ ಕನ್ನೊ ಅವರು 2019 ರಲ್ಲಿ ಒಂಬತ್ತು ಕ್ಯಾನ್‌ಗಳನ್ನು ಬ್ಯಾಲೆನ್ಸ್ ಮಾಡುವ ಮೂಲಕ ಅದನ್ನು ಮುರಿದಿದ್ದರು.
ಅಮೆರಿಕಾ ಮೂಲದ ಜೇಮೀ ಕೀಟನ್ ಇದೀಗ 10 ಪಾನೀಯದ ಬಾಟಲಿಗಳನ್ನು ಬ್ಯಾಲೆನ್ಸ್ ಮಾಡುವ ಮೂಲಕ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.
ಅಂದಹಾಗೆ, ಕೀಟನ್ ನ ಆಮ್ಲಜನಕದ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ 23 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಇದು ಅವನ ಚರ್ಮವು ಆಯಸ್ಕಾಂತದಂತೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.
ಇದರ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.