
ಮ್ಯಾಜಿಕ್ ಪ್ರದರ್ಶನ ಕಲೆಗಳ ಅತ್ಯಂತ ಹಳೆಯ ಪ್ರಕಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಬ್ಬ ಒಳ್ಳೆಯ ಜಾದೂಗಾರನು ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ದಿ ಟುನೈಟ್ ಶೋನಲ್ಲಿ ಅಂತಹ ಒಬ್ಬ ಜಾದೂಗಾರನ ಪ್ರದರ್ಶನ ಕಾರ್ಯಕ್ರಮವೀಗ ವೈರಲ್ ಆಗಿದೆ.
ಕಾರ್ಯಕ್ರಮದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಇದರ ವಿಡಿಯೋ ಹಂಚಿಕೊಳ್ಳಲಾಗಿದೆ. ಜಾದೂಗಾರ ಮತ್ತು ಮನಶಾಸ್ತ್ರಜ್ಞ ಜೋಶ್ ಬೆಕರ್‌ಮ್ಯಾನ್ ಜಿಮ್ಮಿ ಫಾಲನ್‌ನೊಂದಿಗೆ ಸಂವಹನ ನಡೆಸುವುದನ್ನು ವಿಡಿಯೋದಲ್ಲಿ ನೋಡಬಹುದು.
ನ್ಯೂಯಾರ್ಕ್ ನಗರದಲ್ಲಿನ ರೆಸ್ಟೋರೆಂಟ್‌ನ ಹೆಸರಿನ ಬಗ್ಗೆ ಯೋಚಿಸಲು ಅವರು ಫಾಲನ್‌ಗೆ ಕೇಳುತ್ತಾರೆ. ನಂತರ ಜಾದೂಗಾರನು ಫಾಲನ್‌ಗೆ ಕೆಲವೇ ಪ್ರಶ್ನೆಗಳನ್ನು ಕೇಳುವ ಮೂಲಕ ಸರಿಯಾದ ಹೆಸರನ್ನು ಊಹಿಸುವುದಾಗಿ ಹೇಳುತ್ತಾನೆ. ಹೀಗೆ ಹಲವಾರು ಕುತೂಹಲಕಾರಿಯಾಗಿರುವ ವಿಷಯಗಳನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.
ವಿಡಿಯೋ ಸುಮಾರು 14,000 ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಸಂಖ್ಯೆಗಳು ಹೆಚ್ಚುತ್ತಿವೆ. ಹೆಚ್ಚುವರಿಯಾಗಿ, ಶೇರ್ 200 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.