ಇಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ 37ನೇ ಹುಟ್ಟುಹಬ್ಬವಾಗಿದ್ದು, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಮಾಫಿಯಾ ಚಿತ್ರ ತಂಡ ಇಂದು ಬರ್ತಡೆ ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಪ್ರಜ್ವಲ್ ದೇವರಾಜ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲಿದೆ.
ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದು, ಶೈನ್ ಶೆಟ್ಟಿ, ಒರಟ ಪ್ರಶಾಂತ್, ಹಾಗೂ ವಾಸುಕಿ ವೈಭವ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್ ನಲ್ಲಿ ಕುಮಾರ್ ಬಿ ನಿರ್ಮಾಣ ಮಾಡಿದ್ದು, ಅನುಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸಿ ರವಿಚಂದ್ರನ್ ಸಂಕಲನ, ಮಾಸ್ತಿ ಸಂಭಾಷಣೆ, ಪ್ರಮೋದ್ ಮರವಂತೆ ಸಾಹಿತ್ಯ, ಹಾಗೂ ಎಸ್ ಪಂಡಿ ಕುಮಾರ್ ಛಾಯಾಗ್ರಹಣವಿದೆ ವಿನೋದ್, ಡಿಫರೆಂಟ್ ಡ್ಯಾನಿ, ಸತೀಶ್, ಹಾಗೂ ಜಾಲಿ ಬಾಸ್ಟಿಯನ್ ಅವರ ಸಾಹಸ ನಿರ್ದೇಶನವಿದೆ.