ರಸ್ತೆ ಅಪಘಾತ ತಪ್ಪಿಸಲು ಸರ್ಕಾರ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಎಷ್ಟೇ ನಿಯಮಗಳು ಜಾರಿಗೆ ಬಂದ್ರೂ ರಸ್ತೆ ಅಪಘಾತದ ಸಂಖ್ಯೆ ಕಡಿಮೆಯಾಗ್ತಿಲ್ಲ. ಹೆದ್ದಾರಿಯಲ್ಲಿ ಅತಿಯಾದ ವೇಗ, ಅಪಘಾತಕ್ಕೆ ಕಾರಣವಾಗ್ತಿದೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈವೇಯಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 120 ಕಿಲೋಮೀಟರ್ ಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ. ಗರಿಷ್ಠ ವೇಗವನ್ನು 80 ಕಿಲೋಮೀಟರ್ ಗೆ ಇಳಿಸುವಂತೆ ಕೋರ್ಟ್ ಸೂಚನೆ ನೀಡಿದೆ. ವಿಚಾರಣೆ ವೇಳೆ, ರಸ್ತೆ ಅಪಘಾತಕ್ಕೆ, ಅತಿವೇಗ ಕಾರಣವೆಂದು ಹೇಳಿದ್ದಾರೆ.
ಉತ್ತಮ ರಸ್ತೆಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿಯ ಅಭಿಪ್ರಾಯದ ನಂತರ ವೇಗ ಮಿತಿಯನ್ನು ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ ಎಂದು ಕೇಂದ್ರದ ಪರ ವಾದ ಮಂಡಿಸಲಾಯ್ತು. ಆದ್ರೆ ಈ ವಾದವನ್ನು ಕೋರ್ಟ್ ಸ್ವೀಕರಿಸಲು ನಿರಾಕರಿಸಿದೆ.
ಅಧಿಕಾರಿಗಳು ಸ್ಪೀಡ್ ಗನ್, ಸ್ಪೀಡ್ ಇಂಡಿಕೇಶನ್ ಡಿಸ್ಪ್ಲೇಗಳು ಮತ್ತು ಡ್ರೋನ್ ಗಳ ಸಹಾಯದಿಂದ ಅತಿ ವೇಗವನ್ನು ಗುರುತಿಸಬೇಕು. ವೇಗದ ಚಾಲಕರಿಗೆ ಶಿಕ್ಷೆ ವಿಧಿಸಬೇಕೆಂದು ಕೋರ್ಟ್ ಹೇಳಿದೆ. ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಬೇಕೆಂದು ಸೂಚಿಸಿದೆ.
ಕೇಂದ್ರ ಸರ್ಕಾರ, ಗರಿಷ್ಠ ವೇಗದ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಎಕ್ಸ್ ಪ್ರೆಸ್‌ವೇಯಲ್ಲಿ ವಾಹನದ ಗರಿಷ್ಠ ವೇಗವನ್ನು ಗಂಟೆಗೆ 100 ಕಿ.ಮೀ ನಿಂದ 120 ಕಿ.ಮೀ.ಗೆ ಹೆಚ್ಚಿಸಲಾಗಿತ್ತು.