ಕೊಡನಾಡು ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಇನ್ನಷ್ಟು ಆಳವಾಗಿ ಸಾಕ್ಷ್ಯವನ್ನು ಹುಡುಕುವ ಪೊಲೀಸರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. 2017 ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ತೋಟದ ನಿವಾಸದಲ್ಲಿ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿ ದರೋಡೆ ನಡೆಸಲಾಗಿತ್ತು.
ಪ್ರಕರಣದ ಸಾಕ್ಷಿ ಹಾಗೂ ಎಐಎಡಿಎಂಕೆಯ ಅನುಭವ್ ರವಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿರ್ಮಲ್ ಕುಮಾರ್, ಪೊಲೀಸರು ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕವೂ ತನಿಖೆ ಮುಂದುವರಿಸಬಹುದು ಎಂದು ಹೇಳಿದ್ದಾರೆ.
ತಿರಸ್ಕರಿಸಲಾದ ಅರ್ಜಿ ವಿಚಾರಣೆಯ ವೇಳೆ, ಪೊಲೀಸರು ಪ್ರಕರಣ ಸಂಬಂಧ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಹೀಗಾಗಿ ತನಿಖೆಯನ್ನು ಇನ್ನಷ್ಟು ಆಳಗೊಳಿಸುವ ಬಗ್ಗೆ ದಾಖಲೆ ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಪ್ರಕರಣ ಸಂಬಂಧ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರಿಗೆ ಅಧಿಕಾರವನ್ನು ಹೆಚ್ಚಿಸಿದಂತಾಗಿದೆ.
ಚಾರ್ಜ್ ಶೀಟ್ನ ಪ್ರಕಾರ, ದಿವಂಗತ ಜಯಲಲಿತಾ ತೋಟದ ನಿವಾಸದಲ್ಲಿ ಈ ಕೊಲೆ ನಡೆದಿದೆ. ಶಸ್ತ್ರಸಜ್ಜಿತರಾದ ದರೋಡೆಕೋರರ ಗುಂಪು ಭದ್ರತಾ ಸಿಬ್ಬಂದಿ ಓಂ ಬಹದ್ದೂರ್ ರನ್ನು ಹತೈಗೈದಿತ್ತು. ಈ ಪ್ರಕರಣವು ನೀಲಗಿರಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.