ಗಣರಾಜ್ಯೋತ್ಸವದ ವೇಳೆ ತಮಿಳುನಾಡ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಸದ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಅಧಿಕಾರಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ವಕೀಲ ಜಿ ರಾಜೇಶ್ ಪೊಲೀಸ್ ದೂರು ದಾಖಲಿಸಿದ್ದಾರೆ.
ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ನೀಡಿರುವ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲಸ ತೊರೆಯುವ ಮುನ್ನ ನಾಟಕೀಯ ಬೆಳವಣಿಗೆ..! ವಿಡಿಯೋ ಮೂಲಕ ತನ್ನ ಸಂಕಷ್ಟ ಬಿಚ್ಚಿಟ್ಟ ಮಹಿಳೆ
ಗಣರಾಜ್ಯೋತ್ಸವ ದಿನದಂದು ಆರ್‌ಬಿಐ ಅಧಿಕಾರಿಗಳು ತಮಿಳು ನಾಡ ಗೀತೆಗೆ ಎದ್ದು ನಿಲ್ಲುವ ಅಗತ್ಯವೇನಿಲ್ಲ ಎಂದು ಕೋರ್ಟ್ ಹೇಳಿರುವ ಕಾರಣ ಹೀಗೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದರಿಂದ ಭಾರೀ ಗದ್ದಲ ಉಂಟಾಯಿತು. ಆದರೆ, ಈ ಕುರಿತು ರಾಜ್ಯ ಸರ್ಕಾರದ ಆದೇಶದ ಬಗ್ಗೆ ತಿಳಿಸಿದಾಗ ಸಿಬ್ಬಂದಿ ಅಲ್ಲಿಂದ ತೆರಳಿದರು.
ರಾಜ್ಯ ಹಣಕಾಸು ಸಚಿವ ಪಿಟಿಆರ್ ತ್ಯಾಗರಾಜನ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಮನೋ ತಂಗರಾಜ್ ಈ ಘಟನೆಯನ್ನು ಖಂಡಿಸಿದ್ದಾರೆ.