ಬೆಂಗಳೂರು: ರಾಜ್ಯದಲ್ಲಿ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ ಪ್ರಕರಣ ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿಯಿಂದಾಗಿ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ. ಇದೀಗ ರಾಜ್ಯದಲ್ಲಿ ಮದ್ರಾಸ್ ಐ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಲಕ್ಷಣಗಳು:
ಕಣ್ಣು ಕೆಂಪಗಾಗುವುದು
ಕಣ್ಣಿನಿಂದ ನೀರು ಸೋರುವುದು
ಕಣ್ಣಿನ ತುರಿಕೆ
ನಿರಂತರವಾಗಿ ಕಣ್ಣು ನೋವು, ಚುಚ್ಚಿದಂತಹ ಅನುಭವ
ದೃಷ್ಟಿ ಮಂಜಾಗುವುದು
ಬೆಳಕು ನೋಡಲು ಸಾಧ್ಯವಾಗದ ಸ್ಥಿತಿ
ಕಣ್ಣಿನ ಎರಡು ರಪ್ಪೆಗಳಲ್ಲಿ ಕೀವು ಮಿಶ್ರಿತದಿಂದ ಕೂಡಿರುವುದು
ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮ:
ಸ್ವಚ್ಛತೆ
ಸೋಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕ ಮಾಡಬಾರದು
ಮದ್ರಾಸ್ ಐ ಸೋಂಕಿತ ವ್ಯಕ್ತಿ ಬಳಸುವ ಕರವಸ್ತ್ರ, ಇತರ ವಸ್ತುಗಳನ್ನು ಬಳಸಬಾರದು
ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು
ಸೋಂಕಿತ ವ್ಯಕ್ತಿಗೆ ಜ್ವರ, ಶೀತ, ಕೆಮ್ಮು ಇದ್ದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು
ಸೋಂಕು ತೀವ್ರವಾಗಿದ್ದರೆ ನೇತ್ರತಜ್ಞರನ್ನು ಭೇಟಿಯಾಗಿ
ಈ ರೀತಿ ಮಾಡುವುದು ಉತ್ತಮ:
ಸ್ವಚ್ಚವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಿ
ಸೋಂಕು ಕಂಡುಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಿರಿ
ಸೋಂಕಿತರು ಪೌಷ್ಠಿಕ ಆಹಾರ ಸೇವಿಸಬೇಕು
ಕರವಸ್ತ್ರ, ಇತರ ವಸ್ತ್ರಗಳನ್ನು ಸಂಸ್ಕರಿಸಿ ಬಳಸಿ
ಈ ರೀತಿ ಮಾಡಬಾರದು:
ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ
ಸ್ವಯಂಚಿಕಿತ್ಸಾ ವಿಧಾನಗಾನ್ನು ಅನುಸರಿಸಬೇಡಿ
ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ
ಸೋಂಕಿತ ವ್ಯಕ್ತಿ ಬಳಸುವ ವಸ್ತು ಮುಟ್ಟಬೇಡಿ