
ಮಡಿಕೇರಿ: ಕೊಡಗು ಜಿಲ್ಲೆಯ ಅನೇಕ ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೊಕ್ಲು ಸಮೀಪದ ಯವಕಪಾಡಿ, ಕಕ್ಕಬೆ, ಕುಂಜಿಲ, ನಾಲಡಿ, ಚೆಯ್ಯಂಡಾಣೆ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.
ಫೆಬ್ರವರಿ 21ರವರೆಗೆ ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕೊಡಗು ಜಿಲ್ಲೆಯಾದ್ಯಂತ ಕಾಫಿ ಕೊಯ್ಲು ಮುಕ್ತಾಯದ ಹಂತದಲ್ಲಿದ್ದು, ಈಗಾಗಲೇ ಅನೇಕರು ಕೊಯ್ಲು ಮುಗಿಸಿ ಕೃತಕವಾಗಿ ತೋಟಗಳಿಗೆ ನೀರು ಸಿಂಪಡಿಸುತ್ತಿದ್ದಾರೆ. ಈಗ ಮಳೆಯಾದರೆ ಕಾಫಿ ಹೂವು ಅರಳಲು ಅನುಕೂಲವಾಗುತ್ತದೆ ಎನ್ನಲಾಗಿದ್ದು, ಹೀಗಾಗಿ ಕಾಫಿ ಬೆಳೆಗಾರರು ಮಳೆ ಎದುರು ನೋಡುತ್ತಿದ್ದಾರೆ.