ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ದೇವರಕೊಲ್ಲಿ ಸಮೀಪ ಭಾರೀ ಮಳೆಯಿಂದ ಎರಡು ಕಡೆ ಭೂಕುಸಿತವಾಗಿದೆ.
ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ. ಮಣ್ಣಿನೊಂದಿಗೆ ಮರಗಳು ರಸ್ತೆ ಮೇಲೆ ಬಂದು ಬಿದ್ದಿವೆ. ಮರ ತೆರವುಗೊಳಿಸಲು ಪ್ರಯಾಣಿಕರು ಕೈಜೋಡಿಸಿದ್ದಾರೆ. ಭೂಕುಸಿತದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.