ಭೋಪಾಲ್: ಪತಿಯ ಮನೆಯಲ್ಲಿ 16 ವರ್ಷಗಳಿಂದ ಬಂಧಿಯಾಗಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ನರಸಿಂಗಪುರದ ರಾನು ಎಂಬ ಮಹಿಳೆಯ ತಂದೆ ಕಿಶನ್ ಲಾಲ್ ಸಾಹು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಿಳೆಯನ್ನು ರಕ್ಷಿಸಲಾಗಿದೆ. ಈ ಬಗ್ಗೆ ಜಹಂಗಿರಾಬಾದ್ ಮಹಿಳಾ ಠಾಣೆಯ ಪೊಲೀಸ್ ಅಧಿಕಾರಿ ಶಿಲ್ಪಾ ಕೌರವ್ ಮಾಹಿತಿ ನೀಡಿದ್ದಾರೆ.
ರಾನು ಅವರನ್ನು 2006ರಲ್ಲಿ ಮದುವೆ ಮಾಡಿಕೊಡಲಾಗಿತ್ತು. 2008ರಿಂದ ಆಕೆಯ ತಂದೆ-ತಾಯಿಯಾಗಲಿ ಅಥವಾ ಇನ್ನಾರಿಗೂ ಆಕೆಯ ಮುಖವನ್ನು ನೋದಲೂ ಕೂಡ ಪತಿ ಹಾಗೂ ಕುಟುಂಬದವರು ಬಿಟ್ಟಿರಲಿಲ್ಲ. ಆಕೆ ಕಳೆದ 16 ವರ್ಷಗಳಿಂದ ಮನೆಯಿಂದಲೂ ಹೊರ ಹೋಗಲು ಬಿಟ್ಟಿರಲಿಲ್ಲ.
ರಾನುವನ್ನು ಆಕೆಯ ಮಗ ಹಾಗೂ ಮಗಳಿಂದಲೂ ಆಕೆಯ ಪತಿ ಹಾಗೂ ಮನ್ನೆಯವರು ದೂರವಿಟ್ಟಿದ್ದರು. ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎಂದು ರಾನು ತಂದೆ ದೂರು ನೀಡಿದ್ದಾರೆ. ರಾನು ಮನೆಯ ಅಕ್ಕಪಕ್ಕದ ಮನೆಯವರು ಆಕೆಯ ತಂದೆಗೆ ಕರೆ ಮಾಡಿ, ರಾನುವಿಗೆ ಆಕೆಯ ಪತಿ ಹಗೂ ಅತ್ತೆ ಕುರುಕುಳ ನೀಡುತ್ತಿದ್ದಾರೆ. ಆಕೆಯ ಸ್ಥಿತಿ ತುಂಬಾ ಹದಗೆಟ್ಟಿದೆ. ಆಕೆಯನ್ನು ಕರೆದುಕೊಂಡು ಹೋಗುವಂತೆ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಂದೆ ಕಿಶನ್ ಲಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಪೊಲೀಸರ ತಂಡ , ಎನ್ ಜಿಒ ಸಹಾಯದಿಂದ ರಾನುವನ್ನು ರಕ್ಷಿಸಿದೆ. ಸದ್ಯ ಆಕೆಯನ್ನು ಆಸ್ಪತ್ರೆಗೆದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.