ಮಕ್ಕಳು ವಿದ್ಯಾಭ್ಯಾಸ ಕಲಿತು ಗೌರವಾನ್ವಿತ ವ್ಯಕ್ತಿಗಳಾಗಲಿ, ದೇಶಕ್ಕೆ ಉತ್ತಮ ಪ್ರಜೆ ಆಗ್ಲಿ ಅಂತ ಪಾಲಕರು ಬಯಸ್ತಾರೆ. ಶಾಲೆಗಳು ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತವೆ. ಇದಕ್ಕೆ ಪಾಲಕರು ಲಕ್ಷಗಟ್ಟಲೆ ಹಣ ಖರ್ಚು ಮಾಡ್ತಾರೆ.
ಆದ್ರೆ ಮಧ್ಯಪ್ರದೇಶದ ಮೂರು ಹಳ್ಳಿ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಆದ್ರೆ ಒಳ್ಳೆಯ ಶಿಕ್ಷಣವನ್ನಲ್ಲ, ದರೋಡೆ, ಕಳ್ಳತನ, ಸುಲಿಗೆ ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ಕಲಿಸಲಾಗುತ್ತದೆ. ಜೊತೆಗೆ ಕದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬೀಳದಂತೆ ಹೇಗೆ ತಪ್ಪಿಸಿಕೊಂಡು ಬರಬೇಕು ಎನ್ನುವ ತರಬೇತಿ ನೀಡಲಾಗುತ್ತದೆ.
ಮಧ್ಯಪ್ರದೇಶದ ರಾಜ್ ಗಢ್ ಜಿಲ್ಲೆಯ ಕಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿ ಹಳ್ಳಿಯಲ್ಲಿ ಮಕ್ಕಳಿಗೆ ಕಳ್ಳತನ, ದರೋಡೆ ಮತ್ತು ಡಕಾಯಿತಿ ಕಲೆ ಕಲಿಸಲಾಗುತ್ತದೆ. ಮಕ್ಕಳು ಇದ್ರಲ್ಲಿ ಪದವಿ ಪಡೆಯಲು ಪಾಲಕರು 3 ಲಕ್ಷದವರೆಗೆ ಖರ್ಚು ಮಾಡಲು ಸಿದ್ಧವಿರುತ್ತಾರೆ.
ಇನ್ನೊಂದು ವಿಶೇಷ ಅಂದ್ರೆ ಒಂದು ವರ್ಷದ ತರಬೇತಿಯ ನಂತರ, ಮಗುವಿನ ಪೋಷಕರು ಗ್ಯಾಂಗ್ ಲೀಡರ್ನಿಂದ ವಾರ್ಷಿಕವಾಗಿ 3 ಲಕ್ಷದಿಂದ 5 ಲಕ್ಷ ರೂಪಾಯಿ ಪಡೆಯುತ್ತಾರೆ. ಈ ಗ್ರಾಮಗಳ 2,000 ಕ್ಕೂ ಹೆಚ್ಚು ತರಬೇತಿ ಪಡೆದ ವ್ಯಕ್ತಿಗಳ ವಿರುದ್ಧ ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ 8,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
12 ಅಥವಾ 13 ವರ್ಷ ವಯಸ್ಸಿನ ಮಕ್ಕಳಿಗೆ ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಅವರ ಪೋಷಕರು ಈ ಗ್ರಾಮಗಳಿಗೆ ಕಳುಹಿಸುತ್ತಾರೆ. ಈ ಕಠೋರ ಪಠ್ಯಕ್ರಮಕ್ಕೆ ಸೇರ್ಪಡೆಗೊಳ್ಳಲು, ಕುಟುಂಬಗಳು 2 ಲಕ್ಷದಿಂದ 3 ಲಕ್ಷದವರೆಗೆ ಶುಲ್ಕವನ್ನು ಪಾವತಿಸುತ್ತವೆ. ಈ ಅಪರಾಧಿಗಳು ಎಷ್ಟು ನುರಿತವರು ಎಂದರೆ ಅವರು ಅಂಗಡಿಗೆ ಭೇಟಿ ನೀಡದೆ ಆಭರಣಗಳ ಮೌಲ್ಯವನ್ನು ನಿರ್ಣಯಿಸಬಲ್ಲವರಾಗಿದ್ದಾರೆ. ಈ ಗ್ರಾಮಕ್ಕೆ ಯಾವುದೇ ಹೊಸ ವ್ಯಕ್ತಿ ಬಂದ್ರೆ ಅವರು ಅಲರ್ಟ್ ಆಗ್ತಾರೆ. ಇವರನ್ನು ಬಂಧಿಸೋದು ಪೊಲೀಸರಿಗೆ ಕಷ್ಟಸಾಧ್ಯವಾಗಿದೆ.