ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಖಾಸಗಿ ಅಂಗವನ್ನು ಸೂಜಿ, ದಾರದಿಂದ ಹೊಲಿಗೆ ಹಾಕಿದ್ದಾನೆ.
64 ವರ್ಷದ ವ್ಯಕ್ತಿಯೊಬ್ಬ ತಮ್ಮ 55 ವರ್ಷದ ಪತ್ನಿಯ ಖಾಸಗಿ ಭಾಗಗಳನ್ನು ಸೂಜಿ ಮತ್ತು ದಾರ ಬಳಸಿ ಹೊಲಿದಿದ್ದಾನೆ. ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಇಂತಹ ಕೃತ್ಯವೆಸಗಿದ್ದಾನೆ
ಘಟನೆಯ ನಂತರ, 55 ವರ್ಷದ ಮಹಿಳೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಂತರ ದೂರುದಾರರನ್ನು ಆಸ್ಪತ್ರಗೆ ದಾಖಲಿಸಿದ್ದು, ಹೊಲಿಗೆಗಳನ್ನು ತೆಗೆಯಲಾಗಿದೆ. ಆರೋಪಿ ಮನೆಯಲ್ಲಿದ್ದ ದಾರ ಮತ್ತು ಸೂಜಿಯನ್ನು ಬಳಸಿದ್ದಾರೆ. ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾವು ಸೂಜಿ ಮತ್ತು ದಾರವನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ದೈಹಿಕ ಮತ್ತು ಮಾನಸಿಕ ಕಿರುಕುಳ ಸೇರಿದಂತೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು 64 ವರ್ಷದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ತನ್ನ ಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ಪತ್ನಿ ಪೊಲೀಸರನ್ನು ಕೇಳಿಕೊಂದಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಯು ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಹೆಂಡತಿ ಹಳ್ಳಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅವನು ಅನುಮಾನಿಸಿ ಥಳಿಸುತ್ತಿದ್ದ ಎನ್ನಲಾಗಿದೆ.