ಅಪ್ರಾಪ್ತ ವಯಸ್ಸಿನ ಹುಡುಗರನ್ನು ಆನ್ಲೈನ್ನ ಫ್ರೀ ಫೈರ್ ಗೇಮ್ನತ್ತ ಸೆಳೆದು, 75,000 ರೂಪಾಯಿಯಷ್ಟು ವಂಚನೆ ಮಾಡಿದ ಆಪಾದನೆ ಮೇಲೆ ಮಧ್ಯ ಪ್ರದೇಶದ ಖರ್ಗೋನೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇಲ್ಲಿನ ಸನವಾದ್ ನಿವಾಸಿಯಾದ ಹಣ್ಣಿನಂಗಡಿ ಮಾಲೀಕರೊಬ್ಬರು, 10 ವರ್ಷ ವಯಸ್ಸಿನ ತಮ್ಮ ಮಗ ಹಾಗೂ ಸಹೋದರ ಸಂಬಂಧಿಯೊಬ್ಬನನ್ನು ಗೇಮ್ನ ಚಟ ಅಂಟಿಸಿಕೊಳ್ಳುವಂತೆ ಇಬ್ಬರು ಟೀನೇಜ್ ಹುಡುಗರು ಮಾಡಿ, ಗೇಮ್ನ ಐಡಿ ರೀಚಾರ್ಜ್ ಮಾಡಲು ದುಡ್ಡು ಕದಿಯುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ವಿದೇಶಕ್ಕೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್: ಕೋವಿನ್ ಆಪ್ ನಲ್ಲಿ ಸಿಗುತ್ತೆ ಕೊರೊನಾ ವರದಿ
ಆಗಸ್ಟ್ 22ರಂದು ತನ್ನ ವ್ಯಾಲೆಟ್ನಲ್ಲಿ ತನ್ನ ಮಗ ದುಡ್ಡು ಕದಿಯುವುದನ್ನು ನೋಡಿದ್ದಾಗಿ ದೂರಿನಲ್ಲಿ ತಿಳಿಸಿದ ದೂರುದಾರ, ತನ್ನ ಪುತ್ರ ಹಾಗೂ ಸಹೋದರ ಸಂಬಂಧಿಗೆ ಆಪಾದಿತರು ಚಾಕು ತೋರಿ ದುಡ್ಡು ತಂದು ಕೊಡಲು ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗೆ ಮಾಡುವ ಮೂಲಕ ತನ್ನ ಮಗ ಹಾಗೂ ಸಂಬಂಧಿಕನಿಂದ ಒಟ್ಟಾರೆ 75,000 ರೂಪಾಯಿಗಳನ್ನು ಕಿತ್ತಿದ್ದಾರೆ ಎಂದು ಆಪಾದಿತರ ಮೇಲೆ ದೂರಲಾಗಿದೆ.
“ದೂರಿನ ಅನ್ವಯ ನಾವು ಭಾರತೀಯ ದಂಡ ಸಂಹಿತೆಯ ಸಿಕ್ಷನ್ 323 (ಉದ್ದೇಶಪೂರಿತವಾಗಿ ಗಾಯಮಾಡಿದ್ದು), 294 (ಅಸಭ್ಯ ನಡವಳಿಕೆ), 506 (ಕ್ರಿಮಿನಲ್ ವರ್ತನೆ) ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯಿದೆಯ ಕಾನೂನುಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ.