ಭೋಪಾಲ್: ಮಧ್ಯಪ್ರದೇಶದಲ್ಲಿ 2021 ರ ಮಾರ್ಚ್ 31 ರವರೆಗೆ 8 ನೇ ತರಗತಿವರೆಗಿನ ಮಕ್ಕಳಿಗೆ ಶಾಲೆ ಇರುವುದಿಲ್ಲ. 9 ರಿಂದ 12 ನೇ ತರಗತಿ ಮಕ್ಕಳಿಗೆ ಶೀಘ್ರವೇ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಯಾವ ಪರೀಕ್ಷೆಯನ್ನು ನಡೆಸುವುದಿಲ್ಲ. ಪ್ರಾಜೆಕ್ಟ್ ವರ್ಕ್ ಮೂಲಕ ಅವರಿಗೆ ಅಂಕ ನೀಡಲಾಗುವುದು ಎಂದು ತಿಳಿಸಿದ್ದಾರೆ.
10, 12 ನೇ ತರಗತಿ ಸದ್ಯದಲ್ಲೇ ಆರಂಭವಾಗಲಿದೆ. ಬೋರ್ಡ್ ಪರೀಕ್ಷೆ ಕೂಡ ನಡೆಯಲಿದೆ. ವಾರಕ್ಕೆ ಒಂದು ಅಥವಾ ಎರಡು ತರಗತಿಗಳನ್ನು ನಡೆಸಲಿದ್ದು ದೈಹಿಕ ಅಂತರ ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಲಾಗುವುದು. ಸೆಪ್ಟೆಂಬರ್ 21 ರಿಂದ 9 ರಿಂದ 12 ನೇ ತರಗತಿಗೆ ಭಾಗಶಃ ಶಾಲೆಗಳು ಆರಂಭವಾಗಿದ್ದು, ಕೊರೋನಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಲಾಗಿದೆ.