ಭೋಪಾಲ್: ದೇಶಾದ್ಯಂತ ಇಂದಿನಿಂದ ಜಾರಿಯಾದ ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಮಧ್ಯಪ್ರದೇಶ ಮೊದಲ ಪ್ರಕರಣ ದಾಖಲಿಸಿದೆ.
ಹೊಸ ಕ್ರಿಮಿನಲ್ ಕಾನೂನುಗಳು ಇಂದು ಜಾರಿಗೆ ಬಂದಿವೆ. ದೇಶಾದ್ಯಂತ ವಸಾಹತುಶಾಹಿ ಯುಗದ ಶಾಸನವನ್ನು ಬದಲಿಸಿ ಈ ಹೊಸ ಕಾನೂನುಗಳ ಅಡಿಯಲ್ಲಿ ಮೊದಲ ಪ್ರಕರಣವನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ದಾಖಲಿಸಲಾಗಿದೆ.
ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಕ್ರಮವಾಗಿ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಿವೆ.
ಭೋಪಾಲ್ ನಲ್ಲಿ ಮೊದಲ ಪ್ರಕರಣ ದಾಖಲು
ಮಧ್ಯಪ್ರದೇಶದಲ್ಲಿ ಹೊಸ ಕಾನೂನಿನ ಅಡಿಯಲ್ಲಿ ಸಂಭವನೀಯ ಮೊದಲ ಪ್ರಕರಣವನ್ನು ಭೋಪಾಲ್‌ನ ನಿಶಾತ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಭೋಪಾಲ್‌ನ ನಿಶಾತ್‌ಪುರ ಪೊಲೀಸ್ ಠಾಣೆಯಲ್ಲಿ 12:05 ಕ್ಕೆ ಹಲ್ಲೆ ಮತ್ತು ನಿಂದನೆ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 12:20 ಕ್ಕೆ ಹೊಸ ಕಾನೂನಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಬದಲಾವೆಣೆ
ಭಾರತೀಯ ದಂಡ ಸಂಹಿತೆ IPC ಅಡಿಯಲ್ಲಿ ಜುಲೈ 1, 2024 ರ ಮೊದಲು ಸೆಕ್ಷನ್ 323 ಆಕ್ರಮಣವನ್ನು, ಸೆಕ್ಷನ್ 294 ಅಶ್ಲೀಲತೆ ಮತ್ತು ಸೆಕ್ಷನ್ 327 ಕಿಡಿಗೇಡಿತನ ಮಾಡುವುದವನ್ನು ಹೊಂದಿದೆ. ಈಗ ಭಾರತೀಯ ನ್ಯಾಯ ವ್ಯವಸ್ಥೆ BNS ಅಡಿಯಲ್ಲಿ ಸೆಕ್ಷನ್ 115 ರ ಅಡಿಯಲ್ಲಿ ಆಕ್ರಮಣ, ಸೆಕ್ಷನ್ 296 ರ ಅಡಿಯಲ್ಲಿ ಅಶ್ಲೀಲತೆ ಮತ್ತು ಸೆಕ್ಷನ್ 119 ರ ಅಡಿಯಲ್ಲಿ ಕಿಡಿಗೇಡಿತನವನ್ನು ಒಳಗೊಂಡಿದೆ.
ನಿಶಾತ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ 12 ಗಂಟೆಗೆ ಆರೋಪಿಗಳು ದೂರುದಾರ ಭೈರವ್ ಸಾಹು ವಿರುದ್ಧ ಹಲ್ಲೆ, ಅಶ್ಲೀಲತೆ ಮತ್ತು ಕಿಡಿಗೇಡಿತನ ತೋರಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಹೊಸ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.