
ಇದರ ಮಧ್ಯೆ ನಿಯೋಜಿತ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕತ್ತಿ ಕೌಶಲ್ಯ ಪ್ರದರ್ಶಿಸಿರುವ ಹಳೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. 2019ರ ಡಿಸೆಂಬರ್ ನಲ್ಲಿ ಮೋಹನ್ ಯಾದವ್ ಈ ಪ್ರದರ್ಶನ ನೀಡಿದ್ದು, ರಾಜಕಾರಣದ ಜೊತೆಗೆ ಅವರಿಗಿರುವ ಮತ್ತೊಂದು ಹವ್ಯಾಸ ಸಹ ಈ ಹಳೆ ವಿಡಿಯೋ ಮೂಲಕ ಬಹಿರಂಗವಾಗಿದೆ.
ಕಾಲೇಜು ದಿನಗಳಿಂದಲೂ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ಮೋಹನ್ ಯಾದವ್, ಪದವಿ ನಂತರ ಎಲ್ ಎಲ್ ಬಿ ಹಾಗೂ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಮೋಹನ್ ಯಾದವ್ ಪಿ ಎಚ್ ಡಿ ಕೂಡ ಮಾಡಿದ್ದು, ಪ್ರಮುಖ ಒಬಿಸಿ ನಾಯಕರಾಗಿ ಗುರುತಿಸಿಕೊಂಡಿರುವ ಅವರಿಗೆ ಈಗ ಮಧ್ಯಪ್ರದೇಶದ ಮುಖ್ಯಮಂತ್ರಿಯ ಹುದ್ದೆ ಹುಡುಕಿಕೊಂಡು ಬಂದಿದೆ.