
ಮಹಿಳೆಯೊಂದಿಗೆ ದುರ್ವರ್ತನೆ ತೋರಿ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ಹೊರ ದೂಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಂದಾ ನಿವಾಸಿಯಾದ ಸರಿತಾ ಕುಮಾರಿ (ಹೆಸರು ಬದಲಿಸಲಾಗಿದೆ) ಖಜರಾವೋ-ಲಲಿತ್ಪುರ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಖಜುರಾಹೋದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಮಿತ್ತ ಆಕೆ ಬಾಗೇಶ್ವರ್ ಧಾಮ್ ಗೆ ತೆರಳುತ್ತಿದ್ದಳು.
ಆಕೆ ಇದ್ದ ಸ್ಥಳಕ್ಕೆ ಬಂದ ದುಷ್ಕರ್ಮಿಗೆ ಆಕೆಗೆ ಕಿರುಕುಳ ನೀಡಲಾರಂಭಿಸಿದ. ಇದನ್ನು ಪ್ರತಿಭಟಿಸಿದ ಸರಿತಾ ಕುಮಾರಿ ಆತನ ಕೆನ್ನೆಗೆ ಬಾರಿಸಿದ್ದಾಳೆ.
ಇದರಿಂದ ಕೋಪಗೊಂಡ ದುಷ್ಕರ್ಮಿ ರೈಲು ಚಲಿಸುತ್ತಿರುವಾಗಲೇ ಆಕೆಯನ್ನು ಹೊರಗೆ ತಳ್ಳಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಚಾತ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.