ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಾಲಾ ವಿದ್ಯಾರ್ಥಿನಿಯೊಂದಿಗೆ ಅಂತರ್ಜಾಲದಲ್ಲಿ ಸ್ನೇಹ ಬೆಳೆಸಿದ ನಂತರ ಕಿರುಕುಳ, ಬ್ಲ್ಯಾಕ್ ಮೇಲ್ ಮತ್ತು ಹಣ ಸುಲಿಗೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ವ್ಯಕ್ತಿಯನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಅನ್ನಪೂರ್ಣ ಪೊಲೀಸ್ ಠಾಣೆಯ ಉಸ್ತುವಾರಿ ಗೋಪಾಲ್ ಪರ್ಮಾರ್ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಮನೆಯಲ್ಲಿ ನಗದು ಮತ್ತು ಚಿನ್ನಾಭರಣ ಕಾಣೆಯಾಗುತ್ತಿರುವುದನ್ನು ಹುಡುಗಿಯ ಪೋಷಕರು ಗಮನಿಸಿದ್ದಾರೆ. ಕಳೆದ ವಾರ, 12 ನೇ ತರಗತಿಯ ವಿದ್ಯಾರ್ಥಿನಿಯ ತಂದೆ ಆಕೆಯ ಫೋನ್‌ನಲ್ಲಿ ಬೆದರಿಕೆ ಸಂದೇಶವನ್ನು ನೋಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.
ಬೆದರಿಕೆ ಸಂದೇಶದ ಬಗ್ಗೆ ಕೇಳಿದಾಗ, ತನ್ನ ಸೋದರಸಂಬಂಧಿಯೊಂದಿಗೆ ಆರೋಪಿಯು ತನ್ನನ್ನು ಹೋಟೆಲ್ ಗೆ ಕರೆದೊಯ್ದು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕ್ಲಿಕ್ ಮಾಡಿದ್ದಾನೆ. ಅವುಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡಿ ಆಕೆಯಿಂದ ಹಣ ಪಡೆದುಕೊಂಡಿದ್ದಾನೆ. ಹುಡುಗಿ ಮನೆಯಲ್ಲಿ ಹಣ, ಚಿನ್ನಾಭರಣ ಕಳವು ಮಾಡಿಕೊಟ್ಟಿದ್ದಾಳೆ. ಸೋದರಸಂಬಂಧಿ ಸಂತ್ರಸ್ತೆಯ ತಂದೆಗೆ ಎಚ್ಚರಿಕೆ ನೀಡಿದ ನಂತರ, ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಆರೋಪಿಯು ತನ್ನಿಂದ 1.2 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿಸಿದ್ದಾಳೆ. ಆತನ ವಿರುದ್ಧ ಕೇಸ್ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ.