ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಮನೆ ಮಾಲಿಕ ಹಾಗೂ ಬಾಡಿಗೆದಾರನ ನಡುವೆ ಪ್ರಧಾನಿ ಮೋದಿ ಫೋಟೋ ವಿಚಾರದಲ್ಲಿ ಕಿತ್ತಾಟ ನಡೆದು, ಪೊಲೀಸರ ಮಧ್ಯಪ್ರವೇಶವಾಗಿದೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೆಳಕಿಗೆ ಬಂದಿರುವ ಈ ವಿಚಿತ್ರ ಪ್ರಕರಣದಲ್ಲಿ, ತಮ್ಮ ಕೋಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಹೊಂದಿದ್ದಕ್ಕಾಗಿ ಮನೆ ಖಾಲಿ ಮಾಡುವಂತೆ ಮನೆ ಮಾಲೀಕರು ಒತ್ತಾಯಿಸುತ್ತಿದ್ದಾರೆ ಎಂದು ಬಾಡಿಗೆದಾರ ಆರೋಪಿಸಿದ್ದಾರೆ.
ಯೂಸುಫ್ ಖಾನ್ ಎಂಬ ವ್ಯಕ್ತಿ ಇಂದೋರ್‌ನ ಪಿರ್ ಗಲಿ ನಿವಾಸಿಯಾಗಿದ್ದು, ತನ್ನ ನೆರವಿಗೆ ಬರುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ನಾನು ಪ್ರಧಾನಿ ಮೋದಿಯಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ಹೀಗಾಗಿ ಅವರ ಫೋಟೋವನ್ನು ಮನೆಯಲ್ಲಿ ಇರಿಸಿದ್ದೇನೆ ಎಂದು ಖಾನ್ ಹೇಳಿಕೊಂಡಿದ್ದಾರೆ.
ಇನ್ನು ಮನೆ ಮಾಲೀಕ ಯಾಕೂಬ್ ಮನ್ಸೂರಿ, ಸುಲ್ತಾನ್ ಮನ್ಸೂರಿ, ಷರೀಫ್ ಮನ್ಸೂರಿ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಹಳೆ ವಾಹನ ಮಾಲೀಕರಿಗೆ ಬೆಚ್ಚಿ ಬೀಳಿಸುವ ಸುದ್ದಿ: ಏ. 1 ರಿಂದ 15 ವರ್ಷದ ಹಳೆ ವಾಹನ ನೋಂದಣಿ ನವೀಕರಣ ಶುಲ್ಕ 8 ಪಟ್ಟು ಹೆಚ್ಚಳ
ನಾನು ಪ್ರಧಾನಿಯವರನ್ನು ತುಂಬಾ ಗೌರವಿಸುತ್ತೇನೆ ಮತ್ತು ಅವರ ಭಾಷಣಗಳನ್ನು ಅನುಸರಿಸುತ್ತೇನೆ. ಅವರ ಚಿತ್ರ ನನ್ನ ಮನೆಯಲ್ಲಿದೆ. ಮನೆ ಮಾಲಿಕ ಫೋಟೋ ತೆಗೆದುಹಾಕಲು ನನ್ನನ್ನು ಒತ್ತಾಯಿಸಿದರು. ನಾನು ಅಸಾಧ್ಯವೆಂದಾಗ, ಅವರು ಬೆದರಿಕೆ ಹಾಕಿ ಮತ್ತು ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದೂರಿನ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಡಿಸಿಪಿ ಮನಿಶಾ ಪಾಠಕ್ ಸೋನಿ, ಪ್ರತಿಯೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಮತ್ತು ಯೂಸುಫ್ ಖಾನ್ ಆಯ್ಕೆಯ ಚಿತ್ರಗಳನ್ನು ಮನೆಯಲ್ಲಿ ಇಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿದೆ. ಮುಸ್ಲಿಂ ಮಹಿಳೆಯೊಬ್ಬರು ತಾನು ಬಿಜೆಪಿಗೆ ಮತ ಹಾಕಿದ್ದರಿಂದ ತನ್ನ ಗಂಡನ ಮನೆಯವರು ಮನೆಯಿಂದ ಹೊರಹಾಕಿದರು ಎಂದು ಹೇಳಿಕೊಂಡಿದ್ದರು. ಪತಿ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದಾಗಿಯೂ ಆಕೆ ಆತಂಕ ವ್ಯಕ್ತಪಡಿಸಿದ್ದಳು.