ಭಾರತದ ರಸ್ತೆಗಳ ಬಗ್ಗೆ ಇರುವ ಅಭಿಪ್ರಾಯ ಏನು ಅಂತ ಆಟ ಆಡೋ ಮಗುಗೆ ಕೇಳಿದ್ರೂ ಹೇಳುತ್ತೆ ಇದರ ಹಿಂದಿನ ಹಕೀಕತ್ತು. ಆದರೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಮೆರಿಕಕ್ಕೆ ಹೋಗಿ ಅಮೆರಿಕದ ರಸ್ತೆಗಳಿಗಿಂತ ಮಧ್ಯಪ್ರದೇಶದ ರಸ್ತೆಗಳು ಉತ್ತಮವಾಗಿದೆ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ನಂತರ ರಸ್ತೆಗಳ ಬಗ್ಗೆ ಸಾಕಷ್ಟು ವಾದ – ವಿವಾದಗಳೇ ನಡೆಯುತ್ತಿದೆ.
ಇನ್ನು ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಈ ಉತ್ತಮ ರಸ್ತೆಗಳಿಂದಾಗಿಯೇ ರಸ್ತೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ಖಾಂಡ್ವಾದ ಮಂಧಾತಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣ್ ಪಟೇಲ್, ಉತ್ತಮ ರಸ್ತೆಗಳಿಂದಾಗಿಯೇ ಜನರು ವೇಗವಾಗಿ ವಾಹನಗಳನ್ನ ಓಡಿಸುವುದಕ್ಕೆ ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಹೌದು ಅತಿವೇಗದಲ್ಲಿ ವಾಹನ ಚಲಾಯಿಸುವುದರಿಂದಲೇ ಅಪಘಾತಗಳಾಗುತ್ತಿವೆ. ವಾಹನಗಳು ಉತ್ತಮವಾಗಿರುವುದರಿಂದಲೇ , ಭಯವೇ ಇಲ್ಲದೆ ವಾಹನ ಚಾಲಕರು ವೇಗವಾಗಿ ಓಡಿಸುತ್ತಿದ್ದಾರೆ. ಇದರಿಂದ ವಾಹನಗಳು ನಿಯಂತ್ರಣ ಕಳೆದುಕೊಳ್ಳುತ್ತಿದೆ. ಇದರಿಂದಾನೇ ಹೆಚ್ಚಿನ ಅಪಘಾತಗಳಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ಒಂದು ವಾರದಿಂದ ಖಾಂಡ್ವಾದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಅಂದರೆ ಅದಕ್ಕೆ ಕಾರಣ ಉತ್ತಮ ರಸ್ತೆಗಳೇ ಅನ್ನುವುದು ಅವರ ಅಭಿಪ್ರಾಯ.
ಖಾಂಡ್ವಾದ ಮಂಧಾತಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣ ಪಟೇಲ್ ಅವರು ಮಾಧ್ಯಮಗಳ ಮುಂದೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಕುರಿತು ಈ ಹೇಳಿಕೆ ನೀಡಿದ್ದಾರೆ. ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನ ನೋಡಬಹುದಾಗಿದೆ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ರಸ್ತೆಗಳು ಉತ್ತಮವಾಗಿದೆ. ಇದೇ ಕಾರಣಕ್ಕೆ ಯಾವುದೇ ಭಯವಿಲ್ಲದೇ ವಾಹನಗಳನ್ನ ವೇಗವಾಗಿ ಓಡಿಸುತ್ತಿದ್ದಾರೆ. ಅದೇ ಸಮಯದಲ್ಲಿ ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿದೆ. ಎಂದು ಹೇಳಿದ್ದಾರೆ.