ಭೋಪಾಲ್: ಮಹಾಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರ ಉಜ್ಜಯಿನಿಯಲ್ಲಿ 21 ಲಕ್ಷ ಮಣ್ಣಿನ ಹಣತೆ ಬೆಳಗಿಸಲಾಗುವುದು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾಶಿವರಾತ್ರಿ ಸಂದರ್ಭದಲ್ಲಿ ಶಿವಜ್ಯೋತಿ ಅರ್ಪಣಂ 2023 ರ ಅಂಗವಾಗಿ ಫೆಬ್ರವರಿ 18 ರಂದು ಶ್ರೀ ಕ್ಷೇತ್ರ ಉಜ್ಜಯಿನಿ ನಗರದಾದ್ಯಂತ 21 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ವರ್ಷ 11 ಲಕ್ಷ ಹಣತೆ ಬೆಳಗಿಸಲಾಗಿತ್ತು. ಈ ಬಾರಿ 21 ಲಕ್ಷ ಬೆಳಗಿಸುವ ಮೂಲಕ ಗಿನ್ನಿಸ್ ದಾಖಲೆಗೆ ಪ್ರಯತ್ನಿಸಲಾಗುವುದು ಎಂದು ಹೇಳಲಾಗಿದೆ. 2022 ರ ದೀಪಾವಳಿ ಸಂದರ್ಭದಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ 15.76 ಲಕ್ಷ ದೀಪ ಬೆಳಗಿಸಿ ದಾಖಲೆ ನಿರ್ಮಿಸಲಾಗಿತ್ತು. ಉಜ್ಜಯಿನಿ 22 ಲಕ್ಷ ದೀಪ ಬೆಳಗಿಸಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.