1989 ರಲ್ಲಿ ತೆರೆಕಂಡಿದ್ದ ಮಿಥುನ್ ಚಕ್ರವರ್ತಿ, ಮಾಧುರಿ ದೀಕ್ಷಿತ್ ಅಭಿನಯದ ‘ಪ್ರೇಮ್ ಪ್ರತಿಜ್ಞಾ’ ಚಿತ್ರದ ದೃಶ್ಯ ಒಂದರ ಕುರಿತು ಹಿರಿಯ ನಟ ರಂಜಿತ್, ಇತ್ತೀಚೆಗೆ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಕಿಂಗ್ ಡೀಟೇಲ್ಸ್ ಬಿಚ್ಚಿಟ್ಟಿದ್ದಾರೆ.
ಈ ಚಿತ್ರದ ದೃಶ್ಯ ಒಂದರಲ್ಲಿ ಖಳನಟರಾಗಿದ್ದ ರಂಜಿತ್, ಮಾಧುರಿ ದೀಕ್ಷಿತ್ ಅವರನ್ನು ಬಲತ್ಕಾರ ಮಾಡುವ ಸನ್ನಿವೇಶವಿದ್ದು, ಆದರೆ ಇದರಲ್ಲಿ ಅಭಿನಯಿಸಲು ನಿರಾಕರಿಸಿದ್ದ ಮಾಧುರಿ ದೀಕ್ಷಿತ್ ಕಣ್ಣೀರಿಟ್ಟಿದ್ದರಂತೆ. ನಿರ್ದೇಶಕರು, ಈ ದೃಶ್ಯ ಚಿತ್ರಕ್ಕೆ ಅನಿವಾರ್ಯವೆಂದು ಮನವರಿಕೆ ಮಾಡಿಕೊಡಲು ಎಷ್ಟೇ ಪ್ರಯತ್ನಿಸಿದರೂ ಒಪ್ಪಲು ತಯಾರಿರಲಿಲ್ಲವಂತೆ.
ಈ ದೃಶ್ಯದಲ್ಲಿ ಪಾಲ್ಗೊಳ್ಳಬೇಕಿದ್ದ ರಂಜಿತ್ ಅವರಿಗೆ ಆರಂಭದಲ್ಲಿ ಚಿತ್ರೀಕರಣ ಏಕೆ ವಿಳಂಬವಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲವಂತೆ. ಕಡೆಗೂ ಮಾಧುರಿ ದೀಕ್ಷಿತ್ ಅವರ ಮನವೊಲಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದ್ದು, ಬಳಿಕ ಚಿತ್ರೀಕರಣ ಸರಾಗವಾಗಿ ನಡೆಯಿತಂತೆ. ಎಏನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹಿರಿಯ ನಟ ರಂಜಿತ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.