
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ ಪಠ್ಯದಲ್ಲಿ ಮಾಡಿದ್ದ ಬದಲಾವಣೆ ಪರಿಷ್ಕರಿಸಲು ರಚಿಸಿರುವ ಪ್ರೊ. ಮಂಜುನಾಥ ಹೆಗಡೆ ನೇತೃತ್ವದ ಸಮಿತಿ ಜನವರಿ 17ರೊಳಗೆ ವರದಿ ಸಲ್ಲಿಸಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಇಲಾಖೆಯ ಅಧಿಕಾರಿಯೊಂದಿಗೆ ಸಭೆ ನಡೆಸಿದ ಸಚಿವರು, ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆ, ಪುಸ್ತಕ ಪರಿಷ್ಕರಣೆ ಕುರಿತು ಚರ್ಚೆ ನಡೆಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಪುಸ್ತಕಗಳ ಮುದ್ರಣ ಕಾರ್ಯಾ ಆರಂಭಿಸಬೇಕಿರುವುದರಿಂದ ಆದಷ್ಟು ಬೇಗ ಶಾಲಾ ಪಠ್ಯಪರಿಷ್ಕರಣಾ ಸಮಿತಿ ವರದಿ ನೀಡಬೇಕು. ಜನವರಿ 17 ರೊಳಗೆ ವರದಿ ಸಲ್ಲಿಸಲು ಕ್ರಮ ವಹಿಸುವಂತೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.