
ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪಿಎ ವಿರುದ್ಧವೇ ಮಹಿಳೆಯೊಬ್ಬರು ಸಚಿವರಿಗೆ ದೂರು ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದ ಮಹಿಳೆಯೊಬ್ಬರು, ಸಮಸ್ಯೆಗಳನ್ನು ಹೇಳಲು ಬಂದರೆ ನಿಮ್ಮ ಆಪ್ತ ಸಹಾಯಕ ಸ್ಪಂದಿಸದೇ ನಮ್ಮನ್ನು ವಾಪಾಸ್ ಕಳುಹಿಸಿದ್ದಾರೆ. ಹೀಗಾದರೆ ನಾವು ಸಮಸ್ಯೆಗಳನ್ನು ಯಾರಿಗೆ ಹೇಳಬೇಕು? ಎಂದು ಸಚಿವರಿಗೆ ಕೇಳಿದ್ದಾರೆ.
ಈ ವೇಳೆ ಸಚಿವರು ಈ ಬಗ್ಗೆ ಪರಿಶೀಲಿಸುತ್ತೇನೆ. ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಮಹಿಳೆಯನ್ನು ಕಳುಹಿಸಿದ್ದಾರೆ.