ಇತ್ತೀಚಿನ ದಿನಗಳಲ್ಲಿ ಸಿನೆಮಾಗಳು 100 ಕೋಟಿ ಕ್ಲಬ್ ಸೇರುವುದು ಸಾಮಾನ್ಯವಾಗಿಬಿಟ್ಟಿದೆ. ಅನೇಕ ಚಿತ್ರಗಳು 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ. ಆದರೆ 90ರ ದಶಕದಲ್ಲಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರವೊಂದು ಭರ್ಜರಿ ಕಲೆಕ್ಷನ್ ಮಾಡಿತ್ತು. ವಿಶೇಷ ಅಂದ್ರೆ ಆ ಸಿನೆಮಾದ ಹಾಡುಗಳು ಈಗಲೂ ಫೇಮಸ್ ಆಗಿವೆ.
ನಟ ರಾಹುಲ್ ರಾಯ್ ಅಭಿನಯದ ‘ಆಶಿಕಿ’ ಆ ಸಮಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಅನು ಅಗರ್ವಾಲ್ ಈ ಚಿತ್ರದಲ್ಲಿ ರಾಹುಲ್ ರಾಯ್‌ಗೆ ಜೋಡಿಯಾಗಿದ್ದರು. ಆ ಸಮಯದಲ್ಲಿ ಆಶಿಕಿ ಬ್ಲಾಕ್ ಬಸ್ಟರ್ ಸಿನೆಮಾ ಆಗಿತ್ತು. ಆ ಸಮಯದಲ್ಲಿ ಅಭಿಮಾನಿಗಳ ಕ್ರೇಝ್ ಎಷ್ಟಿತ್ತೆಂದರೆ ಚಿತ್ರದಲ್ಲಿ ರಾಹುಲ್ ರಾಯ್ ಎಂಟ್ರಿಯಾಗ್ತಿದ್ದಂತೆ ಪ್ರೇಕ್ಷಕರು ಪರದೆಯತ್ತ ಹಣ ಎಸೆದಿದ್ದರಂತೆ. ರಾಹುಲ್ ರಾಯ್ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದರು. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗಳಿಕೆ ಮಾಡಿತ್ತು.
ಆಶಿಕಿ ಚಿತ್ರದ ಮೂಲಕ ರಾಹುಲ್ ರಾಯ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದರು. ವಿಶೇಷ ಅಂದ್ರೆ 80 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನೆಮಾ ಇದು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 5 ಕೋಟಿ ಗಳಿಸಿದೆ. ಸುಮಾರು 6 ತಿಂಗಳುಗಳ ಕಾಲ ಆಶಿಕಿ ಚಿತ್ರದ ಪ್ರದರ್ಶನಗಳೆಲ್ಲ ಹೌಸ್‌ಫುಲ್ ಆಗಿದ್ದವು. ಅಚ್ಚರಿಯ ಸಂಗತಿ ಎಂದರೆ ‘ಆಶಿಕಿ’ ಚಿತ್ರಕ್ಕಾಗಿ ರಾಹುಲ್ ರಾಯ್ 30,000 ರೂಪಾಯಿ ಸಂಭಾವನೆ ಪಡೆದಿದ್ದರಂತೆ.