ಬೆಂಗಳೂರು: ಮದರಸಾದಲ್ಲಿ ಅಪ್ರಾಪ್ತ ಬಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮದರಸಾ ಸ್ಥಾಪಕ ಟ್ರಸ್ಟಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೊರ್ಟ್ ನಿರಾಕರಿಸಿದೆ.
ಮಾಣಿಕ್ ಮಸ್ತಾನ್ ಮದರಸಾದ ಟ್ರಸ್ಟಿ ಮೊಹಮ್ಮದ್ ಅಮೀರ್ ರಾಜಾ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-ಪೋಕ್ಸೋ ಸೆಕ್ಷನ್ 21ರ ಪ್ರಕಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತ ಮಾಹಿತಿ ಬಂದ ತಕ್ಷಣ ದೂರು ದಾಖಲಿಸಬೇಕು ಎಂದು ತಿಳಿಸಲಾಗಿದೆ. ಅರ್ಜಿದಾರರು ಮಾಹಿತಿಯಿದ್ದರೂ ದೂರು ದಾಖಲಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆರೋಪಿಗಳ ಕೃತ್ಯ ಅತ್ಯಂತ ಭಯಾನಕ. ಈ ರೀತಿ ಘೋರ ಕೃತ್ಯಗಳು ಮಾಹಿತಿಯ ಕೊರತೆ ಹಾಗೂ ಅಂತಹ ಕೃತ್ಯಗಳ ನಿಯಂತ್ರಣ ಮಾಡುವುದರಿಂದ ಹಲವಾರು ಕೃತ್ಯಗಳು ಬೆಳಕಿಗೆ ಬರುವುದಿಲ್ಲ. ಕಿರುಕುಳಕ್ಕೊಳಗಾದ ಸಂತ್ರಸ್ತರು ದೂರುದಾಖಲಿಸಲು ಮುಂದಾಗುವುದಿಲ್ಲ. ಅರ್ಜಿದಾರರು ಮಾಹಿತಿ ತಿಳಿದ ತಕ್ಷಣ ದೂರು ದಖಲಿಸದೇ ಇರುವುದು ಗಂಭೀರ ಆರೋಪವಾಗಿದೆ ಎಂದು ತಿಳಿಸಿದೆ.