ಲಂಡನ್ನ ಮೇಣದ ಮ್ಯೂಸಿಯಂ ಮೇಡಮ್ ಟುಸ್ಸಾಡ್ಸ್ ಬ್ರಿಟನ್ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ರ ಮೇಣದ ಪ್ರತಿಮೆಯನ್ನು ಲಂಕಾಶೈರ್ನ ಉದ್ಯೋಗ ಕೇಂದ್ರದ ಹೊರಗೆ ನಿಲ್ಲಿಸಿದೆ. ಬ್ಲ್ಯಾಕ್ಪೂಲ್ನಲ್ಲಿರುವ ಮೇಣದ ವಸ್ತು ಸಂಗ್ರಹಾಲಯವು ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆಯೇ ಮೇಣದ ಪ್ರತಿಮೆಯನ್ನು ಬೀದಿಗೆ ಸ್ಥಳಾಂತರಿಸಿದೆ.
ಮೆಡಮ್ ಟುಸ್ಸಾಡ್ಸ್ ಬೋರಿಸ್ರ ಮೇಣದ ಪ್ರತಿಮೆಯನ್ನು ಉದ್ಯೋಗ ಕೇಂದ್ರದ ಮುಂದೆ ನಿಲ್ಲಿಸುವ ಮೂಲಕ ಬೋರಿಸ್ರನ್ನು ಅಣುಕಿಸಿದೆ. ಹುದ್ದೆ ಖಾಲಿ ಎಂದು ಬರೆಯಲಾದ ಬೋರ್ಡ್ನ ಎದುರು ಮೇಣದ ಪ್ರತಿಮೆಯನ್ನು ನಿಲ್ಲಿಸಲಾಗಿದ್ದು ಇದರ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿವಿಧ ಹಗರಣಗಳಲ್ಲಿ ಸಿಲುಕಿದ್ದ ಬೋರಿಸ್ ಜಾನ್ಸನ್ ಸಂಪುಟದ ಸಂಸದರು ಒಬ್ಬೊಬ್ಬರಾಗಿ ರಾಜೀನಾಮೆ ನೀಡುತ್ತಿದ್ದಂತೆಯೇ ಒತ್ತಡಕ್ಕೆ ಸಿಲುಕಿ ಬೇರೆ ದಾರಿ ಕಾಣದೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದರು. ಬೋರಿಸ್ ಜಾನ್ಸನ್ ರಾಜೀನಾಮೆ ಬಳಿಕ ಬ್ರಿಟನ್ ಪ್ರಧಾನಿ ರೇಸ್ನಲ್ಲಿ ಇನ್ಫೋಸಿಸ್ ಸಂಸ್ಥಾಪಕ ಅಳಿಯ ರಿಷಿ ಸುನಕ್ ರ ಹೆಸರು ಕೇಳಿ ಬರ್ತಿದೆ.
https://twitter.com/charlotteclaber/status/1545036272929873923?ref_src=twsrc%5Etfw%7Ctwcamp%5Etweetembed%7Ctwterm%5E1545036272929873923%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fmadame-tussauds-roasts-boris-johnson-by-placing-his-statue-outside-job-seeking-centre-5516461.html
https://twitter.com/spriteer_774400/status/1545091658278211590?ref_src=twsrc%5Etfw%7Ctwcamp%5Etweetembed%7Ctwterm%5E1545091658278211590%7Ctwgr%5E%7Ctwcon%5Es1_&ref_url=https%3A%2F%2Fwww.news18.com%