ಹುಬ್ಬಳ್ಳಿ ಜನರ ನಿದ್ದೆಗೆಡಿಸಿದ್ದ ಹುಚ್ಚುನಾಯಿಯನ್ನು ಸೆರೆಹಿಡಿಯಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಹುಚ್ಚು ನಾಯಿ ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಜನರ ಕಚ್ಚಿ ಗಾಯಗೊಳಿಸಿದೆ.
ಗೋಕುಲ ರಸ್ತೆಯಲ್ಲಿ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ್ದು, ಜನ ಆತಂಕಗೊಂಡಿದ್ದಾರೆ. ಗಾಯಗೊಂಡ 16 ಮಂದಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 30ಕ್ಕೂ ಅಧಿಕ ಮಂದಿಯನ್ನು ಕಚ್ಚಿ ಗಾಯಗೊಳಿಸಿದ್ದ ಹುಚ್ಚುನಾಯಿಯನ್ನು ವಾಸವಿನಗರ ಸಮೀಪ ಸೆರೆಹಿಡಿಯಲಾಗಿದೆ.
ಮಹಾನಗರ ಪಾಲಿಕೆ ಸಿಬ್ಬಂದಿ ವಾಸವಿನಗರದ ಸಮೀಪ ಹುಚ್ಚುನಾಯಿಯನ್ನು ಸೆರೆಹಿಡಿದಿದ್ದಾರೆ. ಹುಚ್ಚು ಹಿಡಿದ ಸಾಕು ನಾಯಿಯಿಂದ ಮಾರಣಾಂತಿಕ ದಾಳಿ ನಡೆದಿದೆ. ಹುಚ್ಚು ಹಿಡಿದ ಹಿನ್ನೆಲೆ ನಾಯಿಯನ್ನು ಮಾಲೀಕರು ಬೀದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.