ಬೆಂಗಳೂರು : ಮಾರ್ಚ್ 25ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ, ನಕಲು ತಡೆಯಲು ವಿದ್ಯಾರ್ಥಿಗಳು ಗೋಡೆಯ ಕಡೆ ಮುಖ ಮಾಡಿ ಕುಳಿತುಕೊಳ್ಳಲು ಅನುವಾಗುವಂತೆ ಡೆಸ್ಕ್ಗಳನ್ನು ಜೋಡಿಸಲು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.
ಮಂಡಳಿಯ ಇಂತಹ ಕ್ರಮಗಳು ನಕಲು ತಡೆಯುವ ಜೊತೆಗೆ, ವಿಚಕ್ಷಣ ದಳ ಕೊಠಡಿ ಪ್ರವೇಶಿಸಿದಾಗ ವಿದ್ಯಾರ್ಥಿಗಳು ಅತ್ತ ಗಮನಹರಿಸುವುದನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿ ಕುಳಿತರೆ ಬೇರೆಯವರು ಬಂದು ಹೋಗುವುದು ಗಮನಕ್ಕೆ ಬರುವುದಿಲ್ಲ. ಹಾಗಾಗಿ ಇಂತಹ ಸೂಚನೆಗಳನ್ನು ನೀಡಲಾಗಿದೆ ಎಂದು ಮಂಡಳಿ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
ಬಾಗಿಲಿನಿಂದ ವಿಮುಖರಾಗಿ ಗೋಡೆ ಕಡೆ ಮುಖ ಮಾಡಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೊಠಡಿಗೆ ವಿಚಕ್ಷಣ ದಳ ಅಥವಾ ಬೇರೆಯವರು ಬಂದು ಹೋಗುವಾಗ ವಿದ್ಯಾರ್ಥಿಗಳ ಗಮನ ಆ ಕಡೆ ಸರಿಯದಂತೆ, ವಿಚಲಿತರಾಗದೆ, ಸುಲಲಿತವಾಗಿ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ ಮಂಡಳಿ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.