ಪಶ್ಚಿಮ ಬಂಗಾಳ : ಮಾ. 6 ರಂದು ಪಶ್ಚಿಮ ಬಂಗಾಳದ ಬರಾಸತ್ ಲ್ಲಿ ಮಹಿಳೆಯರ ಬೃಹತ್ ಸಮಾವೇಶ ನಡೆಯಲಿದ್ದು, ಪ್ರಧಾನಿ ಮೋದಿ ಮಹಿಳೆಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 6 ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಸತ್ ನಲ್ಲಿ ಮಹಿಳಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಗುರುವಾರ ತಿಳಿಸಿದ್ದಾರೆ.
ಸಂದೇಶ್ಖಾಲಿಯ ಚಿತ್ರಹಿಂಸೆಗೊಳಗಾದ ಮಹಿಳೆಯರು ಪ್ರಧಾನಿಯನ್ನು ಭೇಟಿ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಪಕ್ಷವು ಇದಕ್ಕೆ ಅನುಕೂಲ ಮಾಡಿಕೊಡಡುತ್ತದೆ ಎಂದು ಮಜುಂದಾರ್ ಹೇಳಿದರು.
ಉತ್ತರ 24 ಪರಗಣದಲ್ಲಿರುವ ಸಂದೇಶ್ಖಾಲಿಯ ಮಹಿಳೆಯರನ್ನು ಪ್ರಧಾನಿ ಭೇಟಿಯಾಗುತ್ತಾರೆಯೇ ಎಂದು ಕೇಳಿದಾಗ, “ಸಂದೇಶ್ಖಾಲಿಯ ಸಹೋದರಿಯರು ಮತ್ತು ತಾಯಂದಿರು ಮೋದಿಯವರನ್ನು ಭೇಟಿಯಾಗಲು ಬಯಸಿದರೆ, ನಾವು ಖಂಡಿತವಾಗಿಯೂ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ” ಎಂದು ಮಜುಂದಾರ್ ಹೇಳಿದರು.
ಸಂದೇಶ್ಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ತೃಣಮೂಲ ಕಾಂಗ್ರೆಸ್ ಪ್ರಬಲ ವ್ಯಕ್ತಿ ಶಹಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು “ಭೂ ಕಬಳಿಕೆ ಮತ್ತು ಬಲವಂತದಿಂದ ಲೈಂಗಿಕ ದೌರ್ಜನ್ಯ” ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.