ದಾವಣಗೆರೆ: ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಕೆಲ ನಾಯಕರ ದುರಹಂಕಾರದಿಂದ ಹಲವು ಮುಖಂಡರು ಬೇಸತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹಲವು ಮುಖಂಡರು ಪಕ್ಷದಲ್ಲಿ ಮಾತನಾಡಲು ಭಯಪಡುತ್ತಿದ್ದಾರೆ. ನಮ್ಮನ್ನು ಕರೆದು ಮಾತನಾಡಿಸಿಲ್ಲ, ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೂ ನಾನು ಪಕ್ಷ ಬಿಡುತೇನೆ ಎಂದು ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಪ್ರಬುದ್ಧತೆ, ಜ್ಞಾನ ಇದೆ. ನಾನು ಚಾಕೋಲೇಟ್, ಪೆಪ್ಪರ್ ಮೆಂಟ್ ತಿಂದುಕೊಂಡು ಬಂದಿಲ್ಲ. ನನಗೆ ಯಾರೂ ಟಾಸ್ಕ್ ಕೊಟ್ಟಿಲ್ಲ ಎಂದು ಹೇಳಿದರು.