ದಾವಣಗೆರೆ: ದಾವಣಗೆರೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ ಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಜಿ.ಎಂ. ಸಿದ್ದೇಶ್ವರ್ ಹಾಗೂ ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬಾರದು. 20 ವರ್ಷ ಸಂಸದನಾಗಿ ಜಿ.ಎಂ.ಸಿದ್ದೇಶ್ವರ್ ಸಾಧನೆ ಏನು? ಸಿದ್ದೇಶ್ವರ್ ಒಂದು ರೀತಿ ಸದ್ದಾಂ ಹುಸೇನ್. ತನಗೆ ಟಿಕೆಟ್ ಇಲ್ಲವೆಂದರೆ ತನ್ನ ಹೆಂಡತಿಗೆ ನೀಡಿ, ಮಕ್ಕಳಿಗೆ ನೀಡಿ. ಅಣ್ಣ-ತಮ್ಮನಿಗೆ ನೀಡಿ ಈ ರೀತಿ ಬೆದರಿಸುವ ಟಿಕೆಟ್ ಪಡೆಯುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಗಾಯತ್ರಿ ಸಿದ್ದೇಶ್ವರ್ ಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ನಾವ್ಯಾರೂ ಒಪ್ಪಲ್ಲ. ಎಷ್ಟೋ ಪ್ರಕರಣಗಳಲ್ಲಿ ಬಿ ಫಾರಂ ಕೊಟ್ಟ ಬಳಿಕ ಟಿಕೆಟ್ ರದ್ದಾಗಿರುವುದೂ ಇದೆ. ಹಾಗಾಗಿ ಗಾಯತ್ರಿ ಸಿದ್ದೇಶ್ವರ್ ಗೆ ನೀಡಿರುವ ಟಿಕೆಟ್ ಬಿಜೆಪಿ ಹಿಂಪಡೆಯಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.