ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರದರ್ಶಕರ ವಲಯದಿಂದ ವೈಭವಿ ಚಿತ್ರಮಂದಿರದ ಮಾಲೀಕ ಎಂ. ನರಸಿಂಹಲು ಆಯ್ಕೆಯಾಗಿದ್ದಾರೆ.
2024-25ನೇ ಅವಧಿಗೆ ಶನಿವಾರ ನಡೆದ ಚುನಾವಣೆಯಲ್ಲಿ ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಆರ್. ಸುಂದರರಾಜು ಅವರನ್ನು ಸೋಲಿಸುವ ಮೂಲಕ ಎಂ. ನರಸಿಂಹಲು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಕೆ.ವಿ. ವೆಂಕಟೇಶ್, ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್, ಪ್ರದರ್ಶಕರ ವಲಯದಿಂದ ಕೆ.ಒ. ರಂಗಪ್ಪ ಆಯ್ಕೆಯಾಗಿದ್ದಾರೆ.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ವಿತರಕರ ವಲಯದಿಂದ ಎಂ.ಎನ್. ಕುಮಾರ್, ಪ್ರದರ್ಶಕರ ವಲಯದಿಂದ ಎಲ್.ಸಿ. ಕುಶಾಲ್, ನಿರ್ಮಾಪಕರ ವಲಯದಿಂದ ಡಿ.ಕೆ. ರಾಮಕೃಷ್ಣ ಚುನಾಯಿತರಾಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ನಿರ್ಮಾಪಕ ಚಿಂಗಾರಿ ಮಹಾದೇವ್ ಗೆಲುವು ಸಾಧಿಸಿದ್ದಾರೆ.