![](https://kannadadunia.com/wp-content/uploads/2023/10/a8aa57e7-fc82-4eaa-bf80-d6167bdc1d96-1024x779.jpg)
ಹಾಸ್ಯ ಕಲಾವಿದ ಚಿಕ್ಕಣ್ಣ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ‘ಉಪಾಧ್ಯಕ್ಷ’ ಚಿತ್ರದ ‘ನನಗೆ ನೀನು’ ಎಂಬ ಮನಮುಟ್ಟುವ ಪ್ರೇಮ ಗೀತೆ ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ವಿಜಯ್ ಪ್ರಕಾಶ್ ಹಾಗೂ ರಕ್ಷಿತಾ ಈ ಹಾಡಿಗೆ ಧ್ವನಿಯಾಗಿದ್ದು, ಎಪಿ ಅರ್ಜುನ್ ಸಾಹಿತ್ಯ ಬರೆದಿದ್ದಾರೆ.
ಡಿ ಎನ್ ಸಿನಿಮಾಸ್ ಬ್ಯಾನರ್ ನಡಿ ಸ್ಮಿತಾ ಉಮಾಪತಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮಲೈಕಾ ಅಭಿನಯಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣವಿದ್ದು, ಕೆ ಎಂ ಪ್ರಕಾಶ್ ಸಂಕಲನವಿದೆ.
![](https://kannadadunia.com/wp-content/uploads/2023/10/3e79ad4d-d6a1-49bc-86cc-49fc9b542175-685x1024.jpg)