alex Certify ‘ಕಠೋರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಠೋರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಆದಿತ್ಯ ಕಿಶೋರ್ ನಿರ್ದೇಶನದ ಲಕ್ಕಿ ರಾಮ್ ಅಭಿನಯದ ‘ಕಠೋರ’ ಚಿತ್ರದ ‘ಆಣೆಯ ಮಾಡಿ’ ಎಂಬ ಸುಮಧುರವಾದ ಮೆಲೋಡಿ ಹಾಡೊಂದನ್ನು ನಿನ್ನೆ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಗಾನ ಪ್ರಿಯರ ಮನ ಮುಟ್ಟಿದೆ. ಐಶ್ವರ್ಯ ರಂಗರಾಜನ್ ಧ್ವನಿಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ವಿಜೇತ ಮಂಜಯ್ಯ ಸಂಗೀತ ಸಂಯೋಜನೆ ನೀಡಿದ್ದು, ಮೂರ್ತಿ ಸಾಹಿತ್ಯ ಬರೆದಿದ್ದಾರೆ.

ಎಂಜಿ ಸ್ಟುಡಿಯೋಸ್ ಬ್ಯಾನರ್ ನಡಿ ಧನುಶ್ರೀ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಲಕ್ಕಿ ರಾಮ್, ಮೋನಿಕಾ ಹಾಗೂ ಕಾವ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ರಾಜೇಶ್ ಗೌಡ ಅವರ ಛಾಯಾಗ್ರಹಣವಿದೆ.

ಆಕ್ಷನ್ ಥ್ರಿಲ್ಲರ್ ಲವ್ ಸ್ಟೋರಿ ಎಲ್ಲವೂ ಈ ಸಿನಿಮಾದಲ್ಲಿದೆ. ಈಗಾಗಲೇ ಕೊನೆ ಹಂತದ ಶೂಟಿಂಗ್ ನಲ್ಲಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...