ದೀಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ‘ಕೆಟಿಎಂ’ ಸಿನಿಮಾದ ‘ಸೋಜಿಗ ಸೋಜಿಗ’ ಎಂಬ ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಕೇಳುಗರ ಗಮನ ಸೆಳೆದಿದೆ.
ಖ್ಯಾತ ಗಾಯಕ ಸಂಜೀವ್ ಹೆಗಡೆ ಧ್ವನಿಯಲ್ಲಿ ಸೊಗಸಾಗಿ ಮೂಡಿ ಬಂದಿರುವ ಈ ಹಾಡಿಗೆ ಚೇತನ್ ರಾವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.ಇನ್ನುಳಿದಂತೆ ಅರಸು ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಂಜನಾ ದಾಸ್ ಹಾಗೂ ಕಾಜಲ್ ಕುಂದಾರ್ ಮುಖ್ಯ ಭೂಮಿಕೆಯಲ್ಲಿದ್ದು, ವಿನಯ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ನವೀನ್ ಕುಮಾರ್ ಛಾಯಾಗ್ರಹಣ, ಮತ್ತು ಅಭಿನಂದನ್ ಡೈಲಾಗ್ ಬರೆದಿದ್ದಾರೆ.