ರವಿಕಿರಣ್ ಹಾಗೂ ಚೇತನ್ ಎಸ್ ಪಿ ಜಂಟಿಯಾಗಿ ನಿರ್ದೇಶಿಸಿರುವ ಕಪಟಿ ಚಿತ್ರದ ‘ಕಲಿ ಆಗಿರು’ ಎಂಬ ಲಿರಿಕಲ್ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಪಿತ್ ಗೌಡ ಈ ಹಾಡಿಗೆ ಧ್ವನಿಯಾಗಿದ್ದು, ಜೋಹಾನ್ ಶೇವನೇಶ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರವನ್ನು ದಯಾಳ್ ಪದ್ಮನಾಭನ್ ತಮ್ಮ ದಯಾಳ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಸುಕೃತ ವಾಗ್ಲೆ ಸೇರಿದಂತೆ ದೇವ್ ದೇವಯ್ಯ, ಸಾಥ್ವಿಕ್ ಕೃಷ್ಣನ್, ಶಂಕರ್ ನಾನ್ ನಾರಾಯಣ, ವೇಣು ಗೋಪಾಲ್, ಮಣಿಕಂಠ ಮುನಿರಾಜು, ಅಜಿತ್ ಕುಮಾರ್ ಅಜು, ವಿಜಯ್ ಟಿಪಿ, ರಮೇಶ್ ಜೆಎಂ ತೆರೆ ಹಂಚಿಕೊಂಡಿದ್ದಾರೆ. ಸಂತೋಷ್ ಟಿ ಸಂಕಲನ, ಸತೀಶ್ ರಾಜೇಂದ್ರನ್ ಛಾಯಾಗ್ರಹಣ. ಹಾಗೂ ರವಿ ಲೀ ಅವರ ಸಾಹಸ ನಿರ್ದೇಶನವಿದೆ.