ಈಗಾಗಲೇ ತನ್ನ ಟೈಟಲ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅಂಜನ್ ಅಭಿನಯದ ‘ತರ್ಕ’ ಚಿತ್ರದ ‘ಕಾದಲ್ ಬೇಬಿ’ ಎಂಬ ಲಿರಿಕಲ್ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಅನುರಾಮ್ ಧ್ವನಿಯಾಗಿದ್ದು, ಅವರದ್ದೇ ಸಾಹಿತ್ಯವಿದೆ. ಇನ್ನುಳಿದಂತೆ ಸೂರಜ್ ಜೋಯಿಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಪುನೀತ್ ಮಾನವ ನಿರ್ದೇಶನದ ಈ ಚಿತ್ರವನ್ನು ವಿಸ್ಮಯ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ರಶ್ಮಿತಾ ಸಂತೋಷ್ ಕುಮಾರ್ ನಿರ್ಮಾಣ ಮಾಡಿದ್ದು, ಉಜ್ವಲಚಂದ್ರ ಸಂಕಲನ. ಅರುಣ್ ಕುಮಾರ್ ಮತ್ತು ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ. ಅಂಜನ್ ಸೇರಿದಂತೆ ಪ್ರತಿಮಾ, ನಿವಾಸ್, ಶ್ವೇತಾ ಶ್ರೀನಿವಾಸ್, ಮುರಳಿ ಮೋಹನ್ ತೆರೆ ಹಂಚಿಕೊಂಡಿದ್ದಾರೆ.