ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಐಷಾರಾಮಿ ಕಾರು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹಾಗೂ ಸುತಮುತ್ತಲಿನ ಪ್ರದೇಶದ ಹೈ ಎಂಡ್ ಕಾರುಗಳೇ ಇವರ ಟಾರ್ಗೆಟ್ ಆಗಿತ್ತು. ಈ ಕಳ್ಳರ ಗುಂಪು ಹ್ಯಾಕಿಂಗ್ ಟೀಂ ಮೂಲಕ ಕಾರಿನ ಡೋರ್ ಗಳನ್ನು ಸಾಫ್ಟ್ ವೇರ್ ಮೂಲಕವಾಗಿ ಹ್ಯಾಕ್ ಮಾಡಿ ತಮ್ಮ ಕಂಟ್ರೋಲ್ ಗೆ ತೆಗೆದುಕೊಳ್ಳುದ್ದರು. ಹೀಗೆ ಕಾರುಗಳನ್ನು ಹ್ಯಾಕ್ ಮಾಡಿ ಕಾರನ್ನು ಕದ್ದು ಪರಾರಿಯಾಗುತ್ತಿದ್ದರು.
ಬ್ಯಾಡರಹಳ್ಳಿ, ಅನ್ನಪೂರ‍್ನೇಶ್ವರಿ ನಗರಗಳಲ್ಲಿ ಹಲವೆಡೆ ಕಾರು ಕಳ್ಳತನ ಮಾಡಿದ್ದರು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಇಸಿದ್ದು, ವಿಚಾರಣೆ ನಡೆಸಿದ್ದಾರೆ.