ದಿನ-ದಿನಕ್ಕೂ ಫ್ಯಾಷನ್ ಟ್ರೆಂಡ್ ಬದಲಾಗ್ತಿರುತ್ತದೆ. ಮಾರುಕಟ್ಟೆಗೆ ದಿನಕ್ಕೊಂದು ಬ್ರಾಂಡ್ ಲಗ್ಗೆ ಇಡುತ್ತೆ. ಇತ್ತೀಚಿನ ದಿನಗಳಲ್ಲಿ ಡಿಸ್ಸ್ಟ್ರೆಸ್ಡ್ ಫ್ಯಾಷನ್ ಪ್ರಸಿದ್ಧಿ ಪಡೆದಿದೆ. ಅಂದ್ರೆ ಜನರು ಹರಿದ, ಬಣ್ಣ ಬಡಿದ ಬಟ್ಟೆಗಳನ್ನು ಧರಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಐಷಾರಾಮಿ ಬ್ರಾಂಡ್ ಸ್ವೆಟರ್ ವೈರಲ್ ಆಗಿದೆ. ಅದ್ರ ಬೆಲೆ ನೋಡಿದ ಜನರು, ಜೇಬು ಮುಟ್ಟಿ ನೋಡಿಕೊಳ್ತಿದ್ದಾರೆ.
ವಿದೇಶಿ ಪ್ರಸಿದ್ಧ ಐಷಾರಾಮಿ ಬ್ರಾಂಡ್ ಬಾಲೆನ್ಸಿಯಾಗಾ, ಹೈ-ಫೈ ಬ್ರ್ಯಾಂಡ್ ಸ್ವೆಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಎಲ್ಲರ ಗಮನ ಸೆಳೆದಿದೆ. ಈ ಸ್ವೆಟರ್ ಬೆಲೆ 1 ಸಾವಿರದ 450 ಡಾಲರ್. ಭಾರತೀಯ ಕರೆನ್ಸಿಯಲ್ಲಿ ಹೇಳೋದಾದ್ರೆ ಇದ್ರ ಬೆಲೆ 1 ಲಕ್ಷ ರೂಪಾಯಿ.
ಈ ಸ್ವೆಟರ್ ನ ಕೆಲ ಭಾಗಗಳು ಹರಿದಿವೆ. ಕಾಲರ್ ಮತ್ತು ತೋಳುಗಳ ಕೆಲ ಭಾಗಗಳನ್ನು ಕತ್ತರಿಸಲಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು, ಈ ಸ್ವೆಟರ್ ಗೇಲಿ ಮಾಡ್ತಿದ್ದಾರೆ. ಇದ್ರ ಡಿಸೈನ್, ಇಲಿ ಕಚ್ಚಿದಂತಿದೆ ಎನ್ನುತ್ತಿದ್ದಾರೆ. ಫ್ಯಾಷನ್ ಹೆಸರಿನಲ್ಲಿ ಜನರ ಸುಲಿಗೆ ಮಾಡಲಾಗ್ತಿದೆ ಎಂದು ಕೆಲವರು ದೂರಿದ್ದಾರೆ.