
ವಿಶ್ವದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ಪದ್ಧತಿ, ಸಂಪ್ರದಾಯ ಜಾರಿಯಲ್ಲಿದೆ. ಮದುವೆ, ಹಬ್ಬ, ಮಕ್ಕಳು, ಸೆಕ್ಸ್ ಸೇರಿದಂತೆ ಎಲ್ಲ ವಿಷ್ಯದಲ್ಲೂ ವಿಭಿನ್ನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಪಶ್ಚಿಮ ಕೀನ್ಯಾದ ಲುವೋ ಬುಡಕಟ್ಟಿನಲ್ಲಿ ಕೆಲವು ವಿಚಿತ್ರ ಪದ್ಧತಿಗಳಿವೆ.
ಈ ಬುಡಕಟ್ಟು ಜನಾಂಗದಲ್ಲಿ, ಪತಿ ಸಾವಿನ ನಂತ್ರ ಪತ್ನಿಯ ಶುದ್ಧೀಕರಣ ನಡೆಯುತ್ತದೆ. ಪತಿ ಸಾವನ್ನಪ್ಪಿದ ನಂತ್ರ, ಒಂದು ರಾತ್ರಿ ಪತ್ನಿ, ಪತಿ ಶವದ ಜೊತೆ ಮಲಗಬೇಕು. ಗಂಡನ ಜೊತೆ ಸಂಬಂಧ ಬೆಳೆಸಿದಂತೆ ಕಲ್ಪನೆ ಮಾಡಿಕೊಳ್ಳಬೇಕು. ಆಗ ಪತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪತ್ನಿ ಶುದ್ಧವಾಗುತ್ತಾಳೆ. ಮತ್ತೊಂದು ಮದುವೆ ಮಾಡಿಕೊಳ್ಳಬಹುದೆಂದು ಅಲ್ಲಿನವರು ನಂಬಿದ್ದಾರೆ.
ಈ ಜನಾಂಗದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಜಗಳ ನಡೆದ್ರೆ , ಪತ್ನಿ ಗಂಡನಿಗೆ ಕೋಲಿನಲ್ಲಿ ಹೊಡೆಯುವಂತಿಲ್ಲ. ಒಂದು ವೇಳೆ ಹೊಡೆದ್ರೆ ಪಾಪ ಕಳೆದುಕೊಳ್ಳುವ ಕೆಲಸ ನಡೆಯುತ್ತದೆ. ಜನಾಂಗದ ಹಿರಿಯರು, ದಂಪತಿಗೆ ಗಿಡಮೂಲಿಕೆ ಕುಡಿಯಲು ನೀಡ್ತಾರೆ. ಅದನ್ನು ಕುಡಿದ ನಂತ್ರ, ಶಾರೀರಿಕ ಸಂಬಂಧ ಬೆಳೆಸಲು ಹೇಳ್ತಾರೆ. ಇದು, ಇಬ್ಬರ ಮಧ್ಯೆಯಿರುವ ಮನಸ್ತಾಪವನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಅಲ್ಲಿನವರದ್ದು.
ಲುವೋ ಬುಡಕಟ್ಟು ಜನಾಂಗದಲ್ಲಿ ಒಂದಕ್ಕಿಂತ ಹೆಚ್ಚು ವಿವಾಹ ಪದ್ಧತಿ ಇನ್ನೂ ಜಾರಿಯಲ್ಲಿದೆ. ಮೊದಲ ಪತ್ನಿ ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ.