ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರವಾಗಿದೆ, ಕಲಬುರಗಿ, ಕೊಪ್ಪಳ, ಬೀದರ್, ಗದಗ ಸೇರಿದಂತೆ ಹಲವು ಕಡೆಗಳಲ್ಲಿ ಚಂದ್ರ ಗ್ರಹಣ ಗೋಚರವಾಗಿದೆ. ರಾಯಚೂರಿನಲ್ಲಿಯೂ ಚಂದ್ರಗ್ರಹಣ ಗೋಚರವಾಗಿದೆ.
ಮಧ್ಯಾಹ್ನ 2.39ಕ್ಕೆ ಚಂದ್ರಗ್ರಹಣ ಆರಂಭವಾಗಿ ಸಂಜೆ 6.19ಕ್ಕೆ ಪೂರ್ಣಗೊಂಡಿದೆ. ಮಧ್ಯಾಹ್ನದ ವೇಳೆ ಚಂದ್ರಗ್ರಹಣ ಸಂಭವಿಸಿದ್ದರೂ ಕಾಣಲಿಲ್ಲ. ಆದರೆ, ಸಂಜೆ ಸೂರ್ಯಾಸ್ತದ ನಂತರ ಹಲವು ಕಡೆಗಳಲ್ಲಿ ಗ್ರಹಣ ಗೋಚರವಾಗಿದೆ. ಎರಡು ವಾರಗಳ ಹಿಂದೆಯಷ್ಟೇ ಅಮಾವಾಸ್ಯೆಯಂದು ಭಾಗಶಃ ಸೂರ್ಯಗ್ರಹಣ ಸಂಭವಿಸಿತ್ತು. ಇಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳನ್ನು ಬಂದ್ ಮಾಡಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.