ನಗರ ಪ್ರದೇಶದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಕಿರಿಕ್ ನಡೆದು ತಾರಕಕ್ಕೆ ಹೋಗಿಬಿಡುತ್ತದೆ. ಲೂಧಿಯಾನದಲ್ಲಿ ಇಂಥದ್ದೆ ಒಂದು ಘಟನೆ ನಡೆದಿದೆ.
ಅಲ್ಲಿನ ಸೆಕ್ಟರ್ 32ರಲ್ಲಿ ನಾಯಿಯೊಂದರ ಮಲವಿಸರ್ಜನೆ ವಿಚಾರದಲ್ಲಿ ಆರಂಭವಾದ ಜಗಳವು ಗುಂಡು ಹಾರಿಸುವುದರಲ್ಲಿ ಅಂತ್ಯವಾಗಿದೆ.
ಗುರುವಾರ ರಾತ್ರಿ ತನ್ನ ಮನೆಯ ಬಳಿ ನಾಯಿ ಮಲವಿಸರ್ಜನೆ ಮಾಡುವುದನ್ನು ನೆರೆಮನೆಯವರು ವಿರೋಧಿಸಿದರು. ಮರುದಿನ ಬೆಳಗ್ಗೆ ಆರೋಪಿ, ಆತನ ತಂದೆ ಮತ್ತು ಇತರರು ತಮ್ಮ ನೆರೆಹೊರೆಯವರ ಮನೆಗೆ ನುಗ್ಗಿ ಎರಡು ಬಾರಿ ಗುಂಡು ಹಾರಿಸಿದ್ದಾರೆ.
ಆರೋಪಿಗಳನ್ನು ವಿಜಯ್ ಗಂಭೀರ್ ಮತ್ತು ಸಿದ್ಧಾರ್ಥ್ ಗಂಭೀರ್ ಎಂದು ಗುರುತಿಸಲಾಗಿದ್ದು, ಅವರ ಸಹಚರರನ್ನು ಗುರುತಿಸಲಾಗಿದೆ.
ರಮಣ್ ಕಪೂರ್, ವಿಜಯ್ ಮತ್ತು ಅವರ ಪತ್ನಿ ಗುರುವಾರ ರಾತ್ರಿ ತಮ್ಮ ನಾಯಿಯೊಂದಿಗೆ ವಾಕಿಂಗ್ ಮಾಡುವಾಗ ನೆರೆಮನೆ ಎದುರು ನಾಯಿ ಮಲವಿಸರ್ಜನೆ ಮಾಡಿತ್ತು. ಆಗ ರಾಮನ್ ಅವರ ತಂದೆ ವಿರೋಧಿಸಿದ್ದು, ಇದು ಜಗಳಕ್ಕೆ ಕಾರಣವಾಯಿತು, ವಿಜಯ್ ರಾಮನ್ ತಂದೆಯನ್ನು ನಿಂದಿಸಿದ್ದರು.
ಸಿದ್ಧಾರ್ಥ್ ಗಂಭೀರ್ ತನ್ನ ಸಹಚರರೊಂದಿಗೆ ಮರುದಿನ ರಾಮನ್ ಮನೆಯ ಕಿಟಕಿಯ ಗಾಜುಗಳನ್ನು ಒಡೆದು ಹಾಕಲು ಪ್ರಾರಂಭಿಸಿದ್ದು, ಹೊರಗೆ ಬಂದಾಗ ಗುಂಡಿನ ದಾಳಿ ನಡೆಸಿದ್ದಾರೆ. ಅವರು ತನ್ನನ್ನು ಶೂಟ್ ಮಾಡಲು ಬಯಸಿದ್ದರು, ಆದರೆ ಗುರಿ ತಪ್ಪಿತು ಎಂದು ರಾಮನ್ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ನಡೆಸಿ ದಾಳಿ ಮಾಡುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.