ಪತ್ನಿಯೊಂದಿಗೆ ಸೋದರಳಿಯನ ಅಕ್ರಮ ಸಂಬಂಧದ ಬಗ್ಗೆ ಅರಿತ 45 ವರ್ಷದ ವ್ಯಕ್ತಿ ಸೋದರಳಿಯನನ್ನು ಬರ್ಬರವಾಗಿ ಕೊಲೆಗೈದ ಘಟನೆ ಪಂಜಾಬ್ನ ಲೂಧಿಯಾನದ ಜಾಗಿರ್ಪುರ ರಸ್ತೆಯಲ್ಲಿ ಸಂಭವಿಸಿದೆ.
ಆರೋಪಿ ಶ್ರವಣ್ ಕುಮಾರ್ ಮಾರ್ಚ್ ತಿಂಗಳಿನಿಂದಲೇ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ಹೊಂದಿದ್ದ. ಹೀಗಾಗಿ ಸೋದರಳಿಯನ ಕೊಲೆಗೆ ಸಂಚು ರೂಪಿಸುತ್ತಲೇ ಇದ್ದ ಎನ್ನಲಾಗಿದೆ. ಅದೇ ರೀತಿ 30 ವರ್ಷದ ಸಪನ್ ಕುಮಾರ್ ಶಾನನ್ನು ಕೊಲೆ ಮಾಡಿದ್ದಾನೆ. ತನಿಖೆ ವೇಳೆ ಆರೋಪಿ ಶ್ರವಣ್ ತಪ್ಪೊಪ್ಪಿಕ್ಕೊಂಡಿದ್ದಾನೆ.
ಸಿದ್ದು ಕುಮಾರ್ ಎಂಬ ಕೂಲಿ ಕಾರ್ಮಿಕ ಫೋನ್ ಕರೆಗೆ ಸಪನ್ ಉತ್ತರಿಸದ ಹಿನ್ನೆಲೆಯಲ್ಲಿ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸಪನ್ ತನ್ನ ಹಾಸಿಗೆ ಮೇಲೆ ಶವದ ರೀತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಮಾತನಾಡಿದ ಜಂಟಿ ಆಯುಕ್ತ ಸಚಿನ್ ಗುಪ್ತಾ, ಬಿಹಾರದ ಮಾದೆಪುರ ನಿವಾಸಿಯಾದ ಮೃತ ವ್ಯಕ್ತಿಯು ಬಿಹಾರದ ಮಾಧೇಪುರ ನಿವಾಸಿಯಾಗಿದ್ದು ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತ ತನ್ನ ಸೋದರ ಮಾವ ಆತನ ಪತ್ನಿ ಹಾಗೂ ಮಕ್ಕಳು ಇದ್ದ ಬಿಲ್ಡಿಂಗ್ನಲ್ಲೇ ವಾಸವಿದ್ದ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವಾಗ ಶ್ರವಣ್ ಪದೇ ಪದೇ ತನಿಖೆ ಬದಲಾಯಿಸೋದನ್ನ ಕಂಡ ಪೊಲೀಸರಿಗೆ ಶಂಕೆ ಶುರುವಾಗಿದೆ. ತನಿಖೆ ತೀವ್ರಗೊಳಿಸುತ್ತಿದ್ದಂತೆಯೇ ಶ್ರವಣ್ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪತ್ನಿಯೊಂದಿಗಿನ ಅಕ್ರಮ ಸಂಬಂಧದ ಹಿನ್ನೆಲೆ ಸಪನ್ ಮೇಲೆ ಕೋಪಗೊಂಡಿದ್ದ ಶ್ರವಣ್ ಆತ ನಿದ್ರಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆಗೈದಿದ್ದಾಗಿ ಪೊಲೀಸರ ಎದುರು ಹೇಳಿದ್ದಾನೆ.