alex Certify 10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ‌ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ‌ ಮಗಳು

26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ ಮೇ ಹತ್ತರಂದು ನಿಧನರಾದರು, ಆದರೆ ಆಕೆ ತಾಯಿಯ ಸಾವಿನ ಬಗ್ಗೆ ತನ್ನ ಸಂಬಂಧಿಕರು ಅಥವಾ ಸ್ನೇಹಿತರಿಗೆ ತಿಳಿಸಲಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ತಿಳಿಸಿದ್ದರಿಂದ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಪತ್ತೆಯಾಯಿತು.

ಎಚ್‌ಎಎಲ್‌ನ ನಿವೃತ್ತ ಎಂಜಿನಿಯರ್ ಆಗಿದ್ದ ಸುನಿತಾ ದೀಕ್ಷಿತ್ 10 ದಿನಗಳ ಹಿಂದೆ ಮೃತಪಟ್ಟಿದ್ದು, ಆಕೆಯ ಮಗಳು ಅಂಕಿತಾ ದೀಕ್ಷಿತ್ (26) ಸುನೀತಾ ಅವರ ಕೋಣೆಯ ಪಕ್ಕದ ಕೋಣೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ.

ಮದುವೆ ಮನೆಯಲ್ಲಿ ಮಹಿಳೆಯರೊಂದಿಗೆ ತಾಳಿ ಪೋಣಿಸಿದ ಶಾಸಕ ರೇಣುಕಾಚಾರ್ಯ

ಘೋರ ವಾಸನೆಯ ಹೊರತಾಗಿಯೂ, ಅಂಕಿತಾ ತನ್ನ ತಾಯಿಯ ಸಾವಿನ ಬಗ್ಗೆ ಸಂಬಂಧಿಕರಿಗೆ ಅಥವಾ ನೆರೆಹೊರೆಯವರಿಗೆ ತಿಳಿಸಲಿಲ್ಲ ಅಥವಾ ಸಹಾಯವನ್ನು ಕೇಳಲಿಲ್ಲ.

ಸುನೀತಾ ದೀಕ್ಷಿತ್ ತನ್ನ ಮಗಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. 1999ರಲ್ಲಿ ತಮ್ಮ ಪತಿ ರಜನೀಶ್ ದೀಕ್ಷಿತ್ ಅವರಿಗೆ ಆಕೆ ವಿಚ್ಛೇದನ ನೀಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...