
ಕೃಷ್ಣ ನಗರ ಠಾಣೆಯಲ್ಲಿ ಯುವತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವತಿಯ ವಿರುದ್ಧ ಐಪಿಸಿ ಸೆಕ್ಷನ್ 394 ಹಾಗೂ 427 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಬ್ ಚಾಲಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಈ ಪ್ರಕರಣವು ಬೆಳಕಿಗೆ ಬಂದಿದೆ. ದೂರಿನಲ್ಲಿ ಕ್ಯಾಬ್ ಚಾಲಕ ಯುವತಿಯು ತನಗೆ ಥಳಿಸಿದ್ದು ಮಾತ್ರವಲ್ಲದೆ ಫೋನ್ನ್ನು ಕಸಿದು ಅದನ್ನು ಪುಡಿ ಮಾಡಿದ್ದಾಳೆ ಎಂದೂ ಉಲ್ಲೇಖಿಸಿದ್ದಾರೆ.
ಶುಕ್ರವಾರ ಯುವತಿ ಹಾಗೂ ಕ್ಯಾಬ್ ಚಾಲಕನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಇನ್ನು ಪ್ರಕರಣ ಸಂಬಂಧ ಯುವತಿ ನೀಡಿರುವ ವಿವರಣೆಯೇ ಬೇರಾಗಿದೆ. ವೇಗವಾಗಿ ಕಾರು ಚಲಾಯಿಸಿಕೊಂಡು ಬರ್ತಿದ್ದ ಕ್ಯಾಬ್ ಚಾಲಕ ನಾನು ರಸ್ತೆ ದಾಟುವ ವೇಳೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ಈತನ ವೇಗದ ಚಾಲನೆಯಿಂದ ನನಗೆ ಚಿಕ್ಕಪುಟ್ಟ ಗಾಯವಾಗಿದೆ ಎಂದು ಹೇಳಿದ್ದಾಳೆ.